This page has been fully proofread once and needs a second look.

ಶ್ರೀ ವಾಯುದೇವರಿಂದ ಭಗವದಾಜ್ಞಾ ಸ್ವೀಕಾರ

ಪ್ರಜ್ವಲಿಪ ಬಣ್ಣಗಳ ಮುಕುಟ, ಹರಿಯಾಜ್ಞೆ!

ಶಿರದಲ್ಲಿ ಧರಿಸಿದರು ಕೈಯ ಜೋಡಿಸಿಕೊಂಡು

ರುದ್ರಾದಿ ದೇವರ ಪ್ರಾರ್ಥನೆಯನವರು

ಮುತ್ತ ಮಾಲೆಯ ತೆರದಿ ಹೃದಯದಲಿ ಧರಿಸಿ

ಸಜ್ಜನರನುದ್ಧರಿಸಲಾ ವಾಯು ದೇವರು

ಭೂಮಿಯೊಳು ಅವತರಿಸಲಿಚ್ಚಿಸಿದರು.
 
ಛಿಸಿದರು ॥ ೪ ॥
 
ಆ ಕಾಲದ ಭೂಲೋಕದ ಸಜ್ಜನರ ಪರಿಸ್ಥಿತಿ

 
ಅವತಾರ ಕಾಲವದು ಸನ್ನಿಹಿತವಾಯ್ತು

ಅಂದಿನಾ ಕಾಲದಲ್ಲಿ ಭೂಲೋಕದಲ್ಲಿ

ಬ್ರಹ್ಮ ಮೀಮಾಂಸೆಯ ತತ್ವರಸಸಾರವು

ಗೀರ್ವಾಣ ಕಾಲದ ಸಂಸತ್ಸ್ಂಪ್ರದಾಯಗಳು

ತಿಳಿಯದಾಗಿದೆ ಎಂದು ತತ್ವಚಿಂತಕರು

ಪರಿತಪಿಸಿ ಚಿಂತೆಯಲ್ಲಿ ಮುಳುಗಿದ್ದರು
 
॥ ೫ ॥
 
ಶ್ರೀ ಅನಂತಾಸನನಿಂದ ಮಧ್ಯಾವಾವತಾರದ ಮುನ್ಸೂಚನೆ

 
ರಜತ ಪೀಠದ ಪುರ ಅಧಿವಾಸಿಯಂದು

ಮುಂಬರುವ ಶುಭವಾರ್ತೆ ಸೂಚಿಸಲು ಎಂದು

ಆ ಪುರದ ಜನರನ್ನು ಮುದಗೊಳಿಸಲೆಂದು

ಸಕಲ ಸಂಭ್ರಮದಿಂದ ಸಡಗರಗಳಿಂದ

ಸಂಕ್ರಮಣ ಉತ್ಸವಕ್ಕೆ ನೆರೆದಿದ್ದ ಜನರಲ್ಲಿ

ಒಬ್ಬನಲಿ ಆವೇಶ ಉಂಟುಮಾಡಿದರು
 
॥ ೬ ॥
 
ಶ್ರೀ ಹರಿಯು ಜನರಲ್ಲಿ ನಂಬಿಕೆಯ ಮೂಡಿಸಲು

ಆವೇಶ ಹುಟ್ಟಿಸಿದ ಹುಂಬನೊಬ್ಬನಲಿ

ಎತ್ತರದ ಕಂಭದ ತುದಿಯನೇರಿದ ಹುಂಬ

ರಂಗ ಮಧ್ಯದಿ ಕುಣಿವ ನಟನ ಪರಿಯಲ್ಲಿ

ಕುಣಿಯಲಾರಂಭಿಸಿದ ಚತುರ ನಟನಂತೆ

ಜನರು ವಿಸ್ಮಯಗೊಂಡು ನೋಡಿದರು ಮಹಿಮೆಯನು
 
22 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
5
 
6
 
7
 
॥ ೭ ॥