This page has been fully proofread once and needs a second look.

ಶ್ರೀ ಗುರುಭೋಭ್ಯೋ ನಮಃ
 

 
ಎರಡನೆಯ ಸರ್ಗ
 

 
ಶ್ರೀ ನಾರಾಯಣನಲ್ಲಿ ಬ್ರಹ್ಮಾದಿ ದೇವತೆಗಳ ಪ್ರಾರ್ಥ
 
ನೆ
 
ಕಲಿಕಾಲ ಬಲದಿಂದ, ಭಾರತದ ನೆಲದಿಂದ

ವಿಜ್ಞಾನ ಭಾಸ್ಕರನು ಅಸ್ತಮಿಸಿ ಬಿಟ್ಟ

ದುರ್ಭಾಷ್ ತಿಮಿರದಲ್ಲಿ ಕುರುಡರಾದರು ಮಂದಿ
 

ಸರಿದಾರಿ ತೋರದೆ ದುರ್ಮಾರ್ಗ ಹಿಡಿದರು
 

ಬ್ರಹ್ಮದೇವನನು ಮುಂದಿರಿಸಿಕೊಂಡು

ವ್ಯಾಕುಲದಿ ಆ ಸುರರು ಹರಿಗೆ ಶರಣಾದರು
 
॥ ೧ ॥
 
ಅವತರಿಸಲು ಶ್ರೀ ವಾಯುದೇವರಿಗೆ ಶ್ರೀ ನಾರಾಯಣನ ಆದೇಶ
 

 
ಶ್ರೀ ಹರಿಗೆ ಹೆಸರುಂಟು ತ್ರಿಯುಗನು ಎಂದು
 

ಕಲಿಯುಗದಿ ಅವತಾರ ಮಾಡನವನು
 

ಬ್ರಹ್ಮದೇವರಿಗಂತೂ ಅವತಾರವೇ ಇಲ್ಲ

ಹಾಗಾಗಿ ಮತ್ತಾರಿಗುಂಟು ಈ ಸಾಮರ್ಥ್ಯ ?

ಜಗಕೆಲ್ಲ ಜೀವನವ ಕೊಡುವ ವಾಯುವ ಕುರಿತು

ಮೆಲು ನಗೆಯ ಸೂಸುತ್ತ ಹರಿಯು ಇಂತೆಂದ
 
॥ ೨ ॥
 
"ವೇದಾರ್ಥ ನಿರ್ಣಯದ ಮಾರ್ಗವರಿಯದ ಮಂದಿ
 

ಪರಿತಪಿಸುತಿಹರಿಂದು ದೀನರಾಗಿ
 

ನಮ್ಮ ಕೃಪೆಗರ್ಹರಾಗಿರುವ ಈ ಜನ
ಕೆ
ಬೇರಾವ ಗತಿಯು ಇಲ್ಲವಾಗಿದೆ ಇಂದು
 

ಸಿಂಗರಿಸು ಭೂಮಿಯನು ಬೇರೊಂದು ರೂಪದಲಿ
 

ಮುದಗೊಳಿಸು ಭೂಮಿಯ ಸತ್ಕರ್ಮಿಗಳು
 
2
 
3
 
ಳನು ॥ ೩ ॥