2023-03-03 01:41:07 by anusharao
This page has been fully proofread once and needs a second look.
" ಅಸತ್" ಎಂಬುದಕೆ "ಸದಸದ್ವಿಲಕ್ಷಣ"
"ಸಂವೃತಿ" ಎಂಬುದನು "ಮಾಯೆ" ಎಂದನು ಅವನು
"ಶೂನ್ಯ" ತತ್ವಕ್ಕಾಗಿ ಬ್ರಹ್ಮನೇ "ಅಖಂಡ" ನೆಂದ
ಬೌದ್ಧ ಮತ ಬೋಧಿಸಿದ ಮುಖ್ಯ ತತ್ವಗಳನ್ನೇ
ಪ್ರಚುರಗೊಳಿಸಿದನವನು ವಿರೂಪಗೊಳಿಸಿ
"ಪ್ರಚ್ಛನ್ನ ಬೌದ್ಧ" ಹೆಸರಾಯ್ತು ಅವಗೆ ॥ ೫೧ ॥
ಬ್ರಹ್ಮ ಸೂತ್ರಗಳೆಲ್ಲ ಸೂರ್ಯನಂತಿಹವು
ವೇದವಾಕ್ಯಗಳಲ್ಲಿ ವಿಷಯವಾಕ್ಯಗಳು
ಸಕಲ ತತ್ವಗಳನ್ನು ಕಿರಣಗಳಿಂ ಬೆಳಗುವುವು
ಇಂತಹ ಸೂರ್ಯನನು ಅಪಹರಿಸಿದನಾತ
ದುಷ್ಟೀಕೆ, ದುರ್ಯುಕ್ತಿ, ದುರ್ಭಾಷ್ಯದಿಂದ
ಜ್ಞಾನಿಗಳು ಹೇಳಿದರು "ಇದು ದೊಡ್ಡ ಚೌರ್ಯ" ॥ ೫೨ ॥
ಕ್ಷಮೆಯೆಂಬ ಸಾಗರನು ನಾರಾಯಣ
ವ್ಯಾಸರೂಪದೊಳಿರುವ ಸಂಕರ್ಷಣ
ಅವ ರಚಿಸಿ ನೀಡಿದ ಬ್ರಹ್ಮ ಸೂತ್ರಕ್ಕೆ
ಸಂಕರನ ಮಾತೆಲ್ಲ ತದ್ವಿರುದ್ಧ
ಬ್ರಹ್ಮಸೂತ್ರಕ್ಕೆಲ್ಲ ಭಾಷ್ಯಕಾರನು ತಾನು
ಎಂದು ನುಡಿದೀತನನು ಸುಡಲಿಲ್ಲ ನಾರಾಯಣ ॥ ೫೩ ॥
ವೇದಗಳು ಪರಿಶುದ್ಧ ಮಣಿಯ ದೀಪಗಳಂತೆ
ಅವನ ವಾಗ್ಜಾಲ ಕೆಸರಿನಲಿ ಮರೆಯಾಯ್ತು ಕಾಂತಿ
ವೇದಾಂತವರಿಯದ ಜನರ ಮನದಲ್ಲಿ
"ಸೃಷ್ಟಿಯಲಿ ಎಲ್ಲೆಲ್ಲೂ ಭೇದವೇ ಇಲ್ಲ"
ಎಂಬ ಅವಿಚಾರವನು ಬಿತ್ತಿ ಬೆಳೆದನು ಆತ
ಅದರಿಂದ ಆತ ಸಂಕರನೆಂದು ಖ್ಯಾತ ॥ ೫೪ ॥
"ಸಂವೃತಿ" ಎಂಬುದನು "ಮಾಯೆ" ಎಂದನು ಅವನು
"ಶೂನ್ಯ" ತತ್ವಕ್ಕಾಗಿ ಬ್ರಹ್ಮನೇ "ಅಖಂಡ" ನೆಂದ
ಬೌದ್ಧ ಮತ ಬೋಧಿಸಿದ ಮುಖ್ಯ ತತ್ವಗಳನ್ನೇ
ಪ್ರಚುರಗೊಳಿಸಿದನವನು ವಿರೂಪಗೊಳಿಸಿ
"ಪ್ರಚ್ಛನ್ನ ಬೌದ್ಧ" ಹೆಸರಾಯ್ತು ಅವಗೆ ॥ ೫೧ ॥
ಬ್ರಹ್ಮ ಸೂತ್ರಗಳೆಲ್ಲ ಸೂರ್ಯನಂತಿಹವು
ವೇದವಾಕ್ಯಗಳಲ್ಲಿ ವಿಷಯವಾಕ್ಯಗಳು
ಸಕಲ ತತ್ವಗಳನ್ನು ಕಿರಣಗಳಿಂ ಬೆಳಗುವುವು
ಇಂತಹ ಸೂರ್ಯನನು ಅಪಹರಿಸಿದನಾತ
ದುಷ್ಟೀಕೆ, ದುರ್ಯುಕ್ತಿ, ದುರ್ಭಾಷ್ಯದಿಂದ
ಜ್ಞಾನಿಗಳು ಹೇಳಿದರು "ಇದು ದೊಡ್ಡ ಚೌರ್ಯ" ॥ ೫೨ ॥
ಕ್ಷಮೆಯೆಂಬ ಸಾಗರನು ನಾರಾಯಣ
ವ್ಯಾಸರೂಪದೊಳಿರುವ ಸಂಕರ್ಷಣ
ಅವ ರಚಿಸಿ ನೀಡಿದ ಬ್ರಹ್ಮ ಸೂತ್ರಕ್ಕೆ
ಸಂಕರನ ಮಾತೆಲ್ಲ ತದ್ವಿರುದ್ಧ
ಬ್ರಹ್ಮಸೂತ್ರಕ್ಕೆಲ್ಲ ಭಾಷ್ಯಕಾರನು ತಾನು
ಎಂದು ನುಡಿದೀತನನು ಸುಡಲಿಲ್ಲ ನಾರಾಯಣ ॥ ೫೩ ॥
ವೇದಗಳು ಪರಿಶುದ್ಧ ಮಣಿಯ ದೀಪಗಳಂತೆ
ಅವನ ವಾಗ್ಜಾಲ ಕೆಸರಿನಲಿ ಮರೆಯಾಯ್ತು ಕಾಂತಿ
ವೇದಾಂತವರಿಯದ ಜನರ ಮನದಲ್ಲಿ
"ಸೃಷ್ಟಿಯಲಿ ಎಲ್ಲೆಲ್ಲೂ ಭೇದವೇ ಇಲ್ಲ"
ಎಂಬ ಅವಿಚಾರವನು ಬಿತ್ತಿ ಬೆಳೆದನು ಆತ
ಅದರಿಂದ ಆತ ಸಂಕರನೆಂದು ಖ್ಯಾತ ॥ ೫೪ ॥