This page has not been fully proofread.

"4 ಅವ
 
ಎಂಬುದಕೆ ಸದಸದ್ವಿಲಕ್ಷಣ "
 
''ಸಂವೃತಿ'' ಎಂಬುದನು 'ಮಾಯೆ'' ಎಂದನು ಅವನು
'ಶೂನ್ಯ'' ತತ್ವಕ್ಕಾಗಿ ಬ್ರಹ್ಮನೇ "ಅಖಂಡ" ನೆಂದ
ಬೌದ್ಧ ಮತ ಬೋಧಿಸಿದ ಮುಖ್ಯ ತತ್ವಗಳನ್ನೇ
ಪ್ರಚುರಗೊಳಿಸಿದನವನು ವಿರೂಪಗೊಳಿಸಿ
'ಪ್ರಚ್ಛನ್ನ ಬೌದ್ಧ' ಹೆಸರಾಯ್ತು ಅವಗೆ
 
ಬ್ರಹ್ಮ ಸೂತ್ರಗಳೆಲ್ಲ ಸೂರನಂತಿಹವು
ವೇದವಾಕ್ಯಗಳಲ್ಲಿ ವಿಷಯವಾಕ್ಯಗಳು
ಸಕಲ ತತ್ವಗಳನ್ನು ಕಿರಣಗಳಿಂ ಬೆಳಗುವುವು
 
ಇಂತಹ ಸೂರ್ಯನನ್ನು ಅಪಹರಿಸಿದನಾತ
 
ದುಷ್ಟಿಕೆ, ದುರ್ಯುಕ್ತಿ, ದುರ್ಭಾಷ್ಯದಿಂದ
ಜ್ಞಾನಿಗಳು ಹೇಳಿದರು "ಇದು ದೊಡ್ಡ ಚೌರ್ಯ"
 
ಕ್ಷಮೆಯೆಂಬ ಸಾಗರನು ನಾರಾಯಣ
ವ್ಯಾಸರೂಪದೊಳಿರುವ ಸಂಕರ್ಷಣ
ಅವ ರಚಿಸಿ ನೀಡಿದ ಬ್ರಹ್ಮ ಸೂತ್ರಕ್ಕೆ
ಸಂಕರನ ಮಾತೆಲ್ಲ ತದ್ವಿರುದ್ಧ
ಬ್ರಹ್ಮಸೂತ್ರಕ್ಕೆಲ್ಲ ಭಾಷ್ಯಕಾರನು ತಾನು
ಎಂದು ನುಡಿದೀತನನು ಸುಡಲಿಲ್ಲ ನಾರಾಯಣ
 
ವೇದಗಳು ಪರಿಶುದ್ಧ ಮಣಿಯ ದೀಪಗಳಂತೆ
ಅವನ ವಾಗ್ದಾಲ ಕೆಸರಿನಲ್ಲಿ ಮರೆಯಾಯ್ತು ಕಾಂತಿ
ವೇದಾಂತವರಿಯದ ಜನರ ಮನದಲ್ಲಿ
ಸೃಷ್ಟಿಯಲ್ಲಿ ಎಲ್ಲೆಲ್ಲೂ ಭೇದವೇ ಇಲ್ಲ''
ಎಂಬ ಅವಿಚಾರವನ್ನು ಬಿತ್ತಿ ಬೆಳೆದನು ಆತ
ಅದರಿಂದ ಆತ ಸಂಕರ ನಂದು ಖ್ಯಾತ
 
16/ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
51
 
52
 
53
 
54