This page has been fully proofread once and needs a second look.

ಸೌಗಂಧಿಕಾ ಪುಷ್ಪವನು ತರುವಾಗ ಭೀಮ

ಮಣಿಮಂತ ಅಸುರನನು ಸಂಹರಿಸಿ ಹೋಗಿದ್ದ

ಅವನೀಗ ರುದ್ರನನು ಮೆಚ್ಚಿಸಿದವನಾಗಿ

ವಾಗ್ನಿಮಿಯಾಗುವೆನೆಂಬ ಬಯಕೆಯನ್ನು ತೋರಿದ್ದ

ಅಂಧ್ರಘ್ರಿತಲ ಮನೆತನದಿ ಮತ್ತೊಂದು ಹೆಸರಿಂದ

ಜನಿಸಿದನು ಮತ್ತಿತರ ರಾಕ್ಷಸರ ಕೂ
 
ಡೆ ॥ ೪೭ ॥
 
ಇಂತೊಂದು ಮಾರ್ಜಾಲ ಕಳ್ಳಮನಸನು ಹೊತ್ತು

ಸಾನ್ನಾಯ್ಯ ಎಂಬೊಂದು ಯಜ್ಞಭಾಗವ ಬಯಸಿದಂತೆ

ಅಸಾರ ವಸ್ತುವಿಗೆ ಆಸೆ ಪಡುವಾ ಶುನಕ

ಪುರೋಡಾಶವೆಂಬುವ ಹವ್ಯ ಬಯಸಿದಂತೆ

ಮತಿಹೀನ ಮಂಗವು ರತ್ನಕಾಶಿಸುವಂತೆ

ವೇದಾದಿಗಳಿಗೆ ಕೈಯಿಟ್ಟ ಆ ಧೂರ್ತ ಪಾಪಿ
 
॥ ೪೮ ॥
 
"ಸನ್ಯಾಸಿಯಾಗದಿರೆ ಜನ ಮಣಿಯರೆನಗೆ"

ಹೀಗೆಂದು ಭಾವಿಸಿದ ಆ ದುಷ್ಟ ವಂಚಕನು

ಶೀಘ್ರದಲಿ ಸನ್ಯಾಸ ಸ್ವೀಕರಿಸಿ ಬಂದನು

ಇದರಿಂದ ಏನಾಯ್ತು ? ಓ ಭಕ್ತ ಜನರೇ !

ತಾವರೆಯ ಹೂವಿನ ತಿಳಿನೀರ ಕೆರೆಯಲ್ಲಿ
 

ಕೆಸರನೆಬ್ಬಿಸಬಂದ ದುಷ್ಟಗಜದಂತಾಯ್ತು
 
॥ ೪೯ ॥
 
ಬೌದ್ಧ ಮತವೆಂಬೊಂದು ಮತವಿತ್ತು ಆಗ

ವೇದ ಪ್ರಾಮಾಣ್ಯವನದು ಉಪೇಕ್ಷಿಸಿತ್ತು

ಆ ಮತದ ಪಕ್ಷವನೇ ಹಿಡಿದಿದ್ದ ಆತ

ಆ ಮತವ ಬೆಂಬಲಿಪ ಯೋಜನೆಯ ಹೂಡಿದ್ದ

ದಕಾಗಿ ಅಂತಹ ಗ್ರಂಥಗಳ ರಚಿಸಿದ

ವೇದ ಸತ್ಯವನವನು ನಿರ್ಲಕ್ಷ್ಯದಲ್ಲಿ ಕಂಡ
 
ಮೊದಲನೆಯ ಸರ್ಗ / 15
 
47
 
48
 
49
 
50
 
॥ ೫೦ ॥