This page has been fully proofread once and needs a second look.

ಕಂಗೊಳಿಸಿದನಾ ಭೀಮ ಸೋದರರ ಸಹಿತ
 

ಕೃಷ್ಣನಡಿದಾವರೆಯ ದುಂಬಿಯಂ
ದೌ
ತೆ
ದ್ರೌ
ಪದಿಯ ಮುಖದಲ್ಲಿ ಹಂಸದಂತೆ

ಪ್ರಜೆಯೆಂಬ ಕಮಲಕ್ಕೆ ಸೂರ್ಯನಂತೆ
 

ಶೋಭಿಸಿದನಾ ಭೀಮ ಅನುಜರಾಗ್ರಜ ಸಹಿತ

ಕಂಗೊಳಿಸಿ ಮೆರೆದನು ವಾಯುಪುತ್ರ
 
॥ ೪೩ ॥
 
"ಪವಿತ್ರ" ನಾಮಕನು ಭಗವಂತ ಕೃಷ್ಣನ

ಸೋದರಿಯ ಮೊಮ್ಮಗನೆ ಪರೀಕ್ಷಿದ್ರಾಜ

ರಾಜ್ಯಭಾರವನವಗೆ ವಹಿಸಿ ಹರಸಿದನು

ಅಸುರರಲಿ ತುಂಬಿದನು ಸಂತಾಪವನ್ನು

ಮೂರುಲೋಕಗಳೊಳಗೆ ಕೀರ್ತಿಯನ್ನು ಗಳಿಸಿ
 

ಕೃಷ್ಣನನು ಎದೆದುಂಬಿ ತುಂಬಿ ಮೂಲರೂಪವ ಸೇರ್ದ
 
॥ ೪೪ ॥
 
ಮಧ್ಯಾಮಾವಾವತಾರ ನಿಮಿತ್ತ ವರ್ಣನೆ :
 

 
ವಿಷ್ಣು ಪದದಾಶ್ರಿತನು ಭೀಮಸೇನ

ಘೋರ ಪ್ರಹಾರದಿಂ ವಧಿಸಿದನು ರಾಕ್ಷಸರ

ಚಂಚಲ ಪ್ರವೃತ್ತಿಯ ರಾಕ್ಷಸರು ಎಲ್ಲರೂ

ಗತಿಸಿದರು ಶೌಲ್ರ್ಯದ ಕೊರತೆಯಿಂದಾಗಿ

ಗಾಳಿಯ ಧಾಳಿಗೆ ಮೋಡ ಚದರುವ ರೀತಿ
 

ಕಾಂತಿಯನು ಕಳಕೊಂಡು ಕಾಣೆಯಾದರು ಕರಗಿ
 
॥ ೪೫ ॥
 
ಸಂಕಟಕೆ ಗುರಿಯಾದ ಈ ಅಸುರರೆಲ್ಲ

ನಿರ್ವೀಯ್ರರ್ಯರಾದರು ಭೀಮ ಬಲದಿಂದ

ಆ ವೀರನೊಡನೆ ಹಗೆಯನ್ನು ಸಾಧಿಸಲು

ಕಲಿಯುಗಕೆ ಕಾಲಿಟ್ಟು ಭೂಮಿಯಲ್ಲಿ ಹುಟ್ಟಿದರು

ಬ್ರಹ್ಮನಿರ್ಗುಣನೆಂಬ ದುಷ್ಟತತ್ವವನಿವರು
 

ಹರಡಿದರು ಬುವಿಯಲ್ಲಿ ಎಲ್ಲ ಕಡೆಯಲೂ
 
14 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
43
 
44
 
45
 
46
 
॥ ೪೬ ॥