This page has been fully proofread once and needs a second look.

ಅತ್ಯಧಿಕ ಭೋಗಗಳ ಲಾಲಸೆಯ ಹೊಂದಿದ್ದ

ಅಪ್ರತಿಮ ಶಕ್ತಿ, ಅರುಣಾಕ್ಷದಿಂದ

ಗಂಧಮಾದನದಲ್ಲಿ ಎಲ್ಲೆಲ್ಲೂ ಅಲೆದಿದ್ದ

ಎರಡು ನಾಲಗೆಯುಳ್ಳ ಮಣಿಮಂತನೆಂಬುವನ

ನಾಯಕತ್ವದೊಳಿದ್ದ ಕ್ರೋಧವ ದೈತ್ಯರನು

ಸಂಹರಿಸಿದನಾ ಭೀಮ ಬಲು ಪರಾಕ್ರಮದಿ
 
॥ ೩೯ ॥
 
ಬೂದಿಯಲ್ಲಿ ಮುಸುಕಿದ್ದ ಕೆಂಡದಾ ಉಂಡೆಗಳು

ತಂಗಾಳಿ ಬಂದಾಗ ಪ್ರಜ್ವಲಿಸುವಂತೆ

ಮಾರುತನ ನೆರವಿನಲಿ ಬಿದಿರುಮಳೆ ಸುಟ್ಟಂ
ತೆ
ಗುಟ್ಟಾಗಿ ಅಡಗಿದ್ದ ಅಜ್ಞಾತ ಭೀಮನು

ಯಾರಿಗೂ ಸೋಲದ, ಎಲ್ಲರನು ಜಯಿಸಿದ್ದ

ಕೀಚಕರ ತಂಡವನ್ನು ಕಣದಲ್ನು ಕ್ಷಣದಲಿ ಕೊಂದನು
 
॥ ೪೦ ॥
 
ಶೋಭಿಸಿದನಾ ಭೀಮ ರಣರಂಗದಲ್ಲಿ

ಅಪ್ರತಿಮ ಆಯುಧಗಳ ಧರಿಸಿದವನು

ಎಂದಿಗೂ ಕೃಷ್ಣನಿಗೆ ಪ್ರಿಯನಾದ ಅವನು

ಶ್ರೀ ಕೃಷ್ಣ ತೋರಿದ ದಾರಿಯಲ್ಲಿಲೆ ನಡೆವವನು

ವೀರ ಪಾರ್ಥನ ಸಂಗ ರಣರಂಗದಲ್ಲಿ ನಿಂದು

ಭೀಷ್ಮ ದ್ರೋಣರ ಎದುರು ಜಯವ ಗಳಿಸಿದನು
 
॥ ೪೧ ॥
 
ಧೃತರಾಷ್ಟ್ರ ಪುತ್ರರು ಅಪ್ರತಿಮ ವೀರರು

ಆದರವರೆಲ್ಲ ಧರ್ಮವನು ತೊರೆದವರು

ಬಂಧುಮಿತ್ರರನೆಲ್ಲ ಕಳೆದುಕೊಂಡವರು

ಕಡುತೀಕ್ಷ್ ಕೋಪವನ್ನು ಪಡೆದುಕೊಂಡವರು
 
46
 

ಹಲವಾರು ರೀತಿಯ ಆಯುಧಗಳಿಂದವರ
 

ಸಂಹರಿಸಿ ಶೋಭಿಸಿದ ಭೀಮಸೇನನು ಅಂದು
 
ಮೊದಲನೆಯ ಸರ್ಗ / 13
 
39
 
40
 
41
 
42
 
॥ ೪೨ ॥