2023-02-26 12:36:26 by ambuda-bot
This page has not been fully proofread.
"ಜಗಕೆ ಗುರುಗಳು ತಾವು, ಓ ಮಧ್ವಮುನಿಗಳೇ !
ವಚನವೆಂಬುವ ಸೂರ ಕಿರಣ ಬಿಂಬಗಳಿಂದ
ದುಃಶಾಸ್ತ್ರವೆಂಬುವ ಕತ್ತಲೆಯ ಹರಿಸಿಹಿರಿ
ಶ್ರೀ ಹರಿಯ ಗುಣವೃಂದ ವೆಲ್ಲವನೂ ತೋರಿಹಿರಿ
ಹದಿನಾಲ್ಕು ಲೋಕವನು ಸದ್ಗುಣದಿ ಮೀರಿಹಿರಿ
ನೀವಾಗಿ ಆಸರೆಯು ನಮ್ಮೆಲ್ಲ ಜನಕೆ
ನಮಿಸುವೆನು ಪ್ರಾಣೇಶ ! ನಮಿಸುವೆನು ರಾಮಸಖ !
ನಮಿಸುವೆನು ಶ್ರೀ ಕೃಷ್ಣ ಪರಮಾತ್ಮ ಪ್ರಾಣಸಖ !
ಅಪ್ರತಿಮ ಬಲಶಾಲಿ ಭೀಮಸೇನರು ತಾವು
ಮೊರೆಹೊಕ್ಕ ಸಜ್ಜನಕೆ ಜ್ಞಾನ ಬಲ ದೈಸಿರಿಯ
ಕರುಣಿಸಲು ಬುವಿಗೆ ಬಂದಿಳಿದಿಹಿರಿ ನೀವು
ನಮಿಸುವೆನು ಮಧ್ವಮುನಿ ! ಜಯವಾಗಲಿ ತಮಗೆ ಜಯವಾಗಲಿ!
ದೇವತೆಗಳಿಂದ ಪುಷ್ಪವೃಷ್ಟಿ (ಗ್ರಂಥೋಪಸಂಹಾರ)
ಇಂತು ನಲಿದಾಡುತ್ತ ಸಂಭ್ರಮದಿ ಕುಣಿಯುತ್ತ
ಬಾನಿನಂಗಳದಲ್ಲಿ ಇಂದ್ರಾದಿ ಸುರಗಣವು
ಗುರು ಮಧ್ವರ ವಿಜಯ ಧ್ವಜವನ್ನು ಹಾರಿಸುತ
ಶ್ರೀ ಹರಿಗೆ ಪ್ರಿಯರಾದ ಆನಂದ ತೀರ್ಥರನು
ಜಗದ ಜನ ವಿಸ್ಮಯದಿ ತಲ್ಲೀನರಾಗಿರಲು
ಹೂವಿನ ಮಳೆಯಲ್ಲಿ ಮುಳುಗಿಸುತ ನಿಂದರು
56
ಹದಿನಾರನೆಯ ಸರ್ಗ / 291
57
58
ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀವಿಕ್ರಮ ಪಂಡಿತಾಚಾರ್ಯರ ಪುತ್ರ
ಶ್ರೀಮನ್ನಾರಾಯಣ ಪಂಡಿತರು ರಚಿಸಿದ ಶ್ರೀಸುಮಧ್ವ ವಿಜಯ
ಮಹಾಕಾವ್ಯದ ಆನಂದಾಂಕಿತವಾದ ಹದಿನಾರನೆಯ ಸರ್ಗದ ಕನ್ನಡ ಪದ್ಯಾನುವಾದ
ಸಮಾಪಿ.
ವಚನವೆಂಬುವ ಸೂರ ಕಿರಣ ಬಿಂಬಗಳಿಂದ
ದುಃಶಾಸ್ತ್ರವೆಂಬುವ ಕತ್ತಲೆಯ ಹರಿಸಿಹಿರಿ
ಶ್ರೀ ಹರಿಯ ಗುಣವೃಂದ ವೆಲ್ಲವನೂ ತೋರಿಹಿರಿ
ಹದಿನಾಲ್ಕು ಲೋಕವನು ಸದ್ಗುಣದಿ ಮೀರಿಹಿರಿ
ನೀವಾಗಿ ಆಸರೆಯು ನಮ್ಮೆಲ್ಲ ಜನಕೆ
ನಮಿಸುವೆನು ಪ್ರಾಣೇಶ ! ನಮಿಸುವೆನು ರಾಮಸಖ !
ನಮಿಸುವೆನು ಶ್ರೀ ಕೃಷ್ಣ ಪರಮಾತ್ಮ ಪ್ರಾಣಸಖ !
ಅಪ್ರತಿಮ ಬಲಶಾಲಿ ಭೀಮಸೇನರು ತಾವು
ಮೊರೆಹೊಕ್ಕ ಸಜ್ಜನಕೆ ಜ್ಞಾನ ಬಲ ದೈಸಿರಿಯ
ಕರುಣಿಸಲು ಬುವಿಗೆ ಬಂದಿಳಿದಿಹಿರಿ ನೀವು
ನಮಿಸುವೆನು ಮಧ್ವಮುನಿ ! ಜಯವಾಗಲಿ ತಮಗೆ ಜಯವಾಗಲಿ!
ದೇವತೆಗಳಿಂದ ಪುಷ್ಪವೃಷ್ಟಿ (ಗ್ರಂಥೋಪಸಂಹಾರ)
ಇಂತು ನಲಿದಾಡುತ್ತ ಸಂಭ್ರಮದಿ ಕುಣಿಯುತ್ತ
ಬಾನಿನಂಗಳದಲ್ಲಿ ಇಂದ್ರಾದಿ ಸುರಗಣವು
ಗುರು ಮಧ್ವರ ವಿಜಯ ಧ್ವಜವನ್ನು ಹಾರಿಸುತ
ಶ್ರೀ ಹರಿಗೆ ಪ್ರಿಯರಾದ ಆನಂದ ತೀರ್ಥರನು
ಜಗದ ಜನ ವಿಸ್ಮಯದಿ ತಲ್ಲೀನರಾಗಿರಲು
ಹೂವಿನ ಮಳೆಯಲ್ಲಿ ಮುಳುಗಿಸುತ ನಿಂದರು
56
ಹದಿನಾರನೆಯ ಸರ್ಗ / 291
57
58
ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀವಿಕ್ರಮ ಪಂಡಿತಾಚಾರ್ಯರ ಪುತ್ರ
ಶ್ರೀಮನ್ನಾರಾಯಣ ಪಂಡಿತರು ರಚಿಸಿದ ಶ್ರೀಸುಮಧ್ವ ವಿಜಯ
ಮಹಾಕಾವ್ಯದ ಆನಂದಾಂಕಿತವಾದ ಹದಿನಾರನೆಯ ಸರ್ಗದ ಕನ್ನಡ ಪದ್ಯಾನುವಾದ
ಸಮಾಪಿ.