This page has been fully proofread once and needs a second look.

ರಜತಪೀಠಕ್ಕೆ ದೇವತೆಗಳ ಆಗಮನ

 
ಮಧ್ವಮುನಿಗಳ ದಿವ್ಯ ವಿಜಯದ ಉತ್ಸವವ

ಗೀರ್ವಾಣರೆಲ್ಲರೂ ಭಕ್ತಿಯಲ್ಲಿ ಪೂಜಿಸುತ

ಮಂದ ಹಾಸವ ತಳೆದು ವಿಸ್ಮಯದಿ ಕೂಡಿ

ಮುನಿ ನಿಕರ, ಗಂಧರ್ವರೆಲ್ಲರ ಸಹಿತ

ತೆರಳಿದರು ಬುಭುವಿಯತ್ತ ಮಧ್ದರ್ಶನಕೆಂದು

ಆನಂದ ತೀರ್ಥರನು ನೋಡಲೆಂದು
 
॥ ೫೨ ॥
 
"ಮಧ್ವಮುನಿ ರಚಿಸಿರುವ ಸಚ್ಛಾಸ್ತ್ರವೆಲ್ಲವೂ

ಶ್ರೀ ಹರಿಯ ಗುಣಗಳಿಗೆ ಹಿಡಿದಿರುವ ಕನ್ನಡಿ"

ಇಂತೆಂದು ಪಾಡುತ್ತ ಕೊಂಡಾಡಿ ಸ್ತುತಿಸುತ್ತ

ಅಪರಿಮಿತ ತೇಜದಲಿ ಗಗನವನು ಬೆಳಗುತ್ತ

ದೇವವೃಂದವು ಅಂದು ಧರೆಯತ್ತ ನೋಡುತ್ತ

ಆನಂದ ತೀರ್ಥರನು ಭಕ್ತಿಯಲ್ಲಿ ಕಂಡರು
 
॥ ೫೩ ॥
 
ಭೂಭಾಗದಲ್ಲಿ ನೆಲೆಸಿ, ಆ ಮಧ್ವಮುನಿಗಳು

ಭುವನ ಭೂಷಿತರಾಗಿ ಜಗವ ಸಲಹಿರುವರು

ಹಲವು ಬಗೆ ಶಿಷ್ಯರಾ ಮಧ್ಯದಲ್ಲಿ ಕುಳಿತು

ಐತರೇಯದ ಮುಖ್ಯ ವ್ಯಾಖ್ಯಾನ ಮಾಡುತ್ತ

ಸಭೆಯಲ್ಲಿ ಬೆಳಗಿದಾ ಮಧ್ವರನು ಕಂಡು

ಗಗನದಲಿ ಆ ಸುರರು ಭಕ್ತಿಯಲ್ಲಿ ನಮಿಸಿದರು.
 
॥ ೫೪ ॥
 
ಶ್ರೀಮಂತರವರು, ಶಶಿವದನ ಭೂಷಿತರು

ಕಮಲನೇತ್ರರು ಅವರು, ಗಂಭೀರ ಧ್ವನಿಯವರು

ಅತಿದಿವ್ಯ ಲಕ್ಷಣರು, ಸಂಪೂರ್ಣ ಕಾಮರು

ಸರ್ವರಿಗೂ ಗುರುವಾದ ಮಧ್ವರನು ಕಾಣುತ್ತ

ನಾವೆಲ್ಲ ಕೃತ ಕೃತ್ಯರೆಂದೆಣಿಸಿ ಆ ಸುರರು

ವಚನ ಪುಷ್ಪಗಳಿಂದ ಪೂಜಿಸಲು ತೊಡಗಿದರು
 
290 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
52
 
53
 
54
 
55
 
॥ ೫೫ ॥