This page has been fully proofread once and needs a second look.

'"ಕೃಷ್ಣಾಮೃತ ಮಹಾರ್ಣವ'" ಗ್ರಂಥ ರಚನೆ
 

 
ಕೆಲವು ಕಾಲದ ಬಳಿಕ ಆನಂದ ತೀರ್ಥರು

ತ್ರಿಭುವನದ ವೈದ್ಯರ ಒಡೆಯರಿಗೆ ಒಡೆಯ

ಧನ್ವಂತ್ರಿ ದೇವನು ಗ್ರಾಮಾಧಿಪತಿಯಾದ

ಕೊಕ್ಕಡ ಎಂಬುವ ದಿವ್ಯ ಕ್ಷೇತ್ರಕ್ಕೆ ಬಂದು

ಅಲ್ಲಿದ್ದ ಭಕ್ತನ ಶ್ರೇಯದ ಸಲುವಾಗಿ

ಶ್ರೀ ಕೃಷ್ಣ ಪರಮಾರ್ಣ ಗ್ರಂಥವನ್ನು ರಚಿಸಿದರು
 
॥ ೪೦ ॥
 
ಜೆಜಿರೆಯಲ್ಲಿ ನಡೆದ ವಿಜಯ
 

 
ಉಚ್ಚಭೂತಿ ಎಂಬ ಮತ್ತೊಂದು ಗ್ರಾಮದಲಿ

"ಎಲ್ಲವನೂ ಬಲ್ಲೆವು" ಎಂಬಂಥ ಗರ್ವದಲಿ

ದುರಭಿಮಾನವ ತಳೆದ ಪಂಡಿತರ ಕುರಿತು
 

ಅವರುಗಳ ಸೊಕ್ಕನ್ನು ಅಡಗಿಸಲೋ ಎಂಬಂತೆ

ಬಾವಿಯಲಿ ಅಡಗಿರುವ ಕಪ್ಪೆಗಳ ತೆರವಿರುವ

ಪಂಡಿತರು ಎಲ್ಲೆಂದು ಮಧ್ವರಬ್ಬರಿಸಿದರು
 
॥ ೪೧ ॥
 
"ಸರ್ವಜ್ಞರಿರಬಹುದು ಈ ಮಧ್ವಮುನಿಗಳು

ಯಜ್ಞಭಂಗಿಯ ಬಗ್ಗೆ ಅಜ್ಞರಿರಬೇಕು"

ಇಂತೆಂದು ಯೋಚಿಸಿದ ವಿದ್ವಾಂಸರೆಲ್ಲ

ಕರ್ಮವಿಷಯಕವಾದ ವೇದಭಾಗಗಳಲ್ಲಿ

ಗಹನಾರ್ಥ ಹೊಂದಿರುವ ಬ್ರಾಹ್ಮಣಗಳಲ್ಲಿನ

ಅರ್ಥವನು ಕೇಳಿದರು ಮಧ್ವರಲ್ಲಿ
 
॥ ೪೨ ॥
 
ಕಿಂಚಿತ್ತು ಅಳುಕದಲೆ ಆನಂದ ತೀರ್ಥರು

ಪಂಡಿತರು ಕೇಳಿದ ವೇದಾರ್ಥ ವಿವರಿಸುತ

ವೇದ ರಸ ಸಾರಕೆ ಚ್ಯುತಿ ಇರದೆ ಸಂಚಯಿಪ

ಪ್ರಜಾಧಿಪ ಬ್ರಹ್ಮನು ಷಷ್ಠೇಷ್ಠಿಯಲಿ ವಿತರಿಸುವ

ನಾರಾಶಂಸ್ವೇ ಮೊದಲಾದ ಮಂತ್ರ ಪ್ರಭೇದಗಳ

ವಿವರಗಳ ತಿಳಿಸಿದರು ಅತಿ ವಿವರದಲ್ಲಿ
 
ಹದಿನಾರನೆಯ ಸರ್ಗ/ 287
 
40
 
41
 
42
 
43
 
॥ ೪೩ ॥