This page has been fully proofread once and needs a second look.

'ಪಾರಂತೀ' ದೇವಾಲಯದಲ್ಲಿ ತೋರಿದ ಮಹಿಮೆ
 

 
ನೈವೇದ್ಯ, ಪೂಜೆಗಳು ಸ್ಥಗಿತ ಗೊಂಡಿದ್ದಂಥ

ಪಾರಂತೀ ಎಂಬ ದೇವಸದನದಿ ಒಮ್ಮೆ

ಅತಿಯಾದ ಭಕ್ತಿಯಲಿ ಮಧ್ವಮುನಿ ತೆರಳಿ

ಗ್ರಾಮಾಧಿಪತಿಗಳನು, ಆ ನಾಡನೃಪನನ್ನು
 

ಒಂದೆಡೆ ಕಲೆ ಹಾಕಿ ಚರ್ಚೆಯನ್ನು ನಡೆಸಿ
 

ಅರ್ಧದಷ್ಟೇ ದಿನದಿ ಭೂತಬಲಿ ನಡೆಸಿದರು
 
॥ ೩೬ ॥
 
ಹಿಂದೊಮ್ಮೆ ದ್ವಾಪರದಿ, ಭೀಮಾವತಾರದಲಿ

ಸೋದರರ ಜೊತೆಗೂಡಿ ಪಂಚಾತ್ಮ ಶ್ರೀ ಹರಿಯ

ಪಾರಂತೀ ಗ್ರಾಮದಲ್ಲಿ ಪ್ರತಿಷ್ಠಿಸಿದುದ ನೆನೆದು

ಭೂತಬಲಿ ಪೂಜೆಯ ಅಂಗದಲ್ಲಿ ಒಂದಾದ

ಜಲಧಿಯನು ಅರ್ಪಿಸಿದ ದೌದ್ರೌಪದಿಯ ಒಡಗೂಡಿ

ಶ್ರೀ ಹರಿಯ ಪೂಜಿಸಿದ ಪರಿಯನ್ನು ಸ್ಮರಿಸಿದರು
 
॥ ೩೭ ॥
 
ಸರಿದಂತರದಲ್ಲಿ ತರಿಸಿದ ಮಳೆ
 

 
ಸರಿದಂತರ ವೆಂಬ ಹೆಸರನ್ನು ಹೊತ್ತಿದ್ದ

ಗ್ರಾಮಕ್ಕೆ ಐತಂದ ಮಧ್ವಮುನಿಗಳು ಒಮ್ಮೆ

ಗ್ರೀಷ್ದಲಿ ಆ ಊರ ಕೆರೆಯು ಒಣಗಿದ ಕೇಳಿ

ತಕ್ಷಣದಿ ಮೋಡಗಳ ಸಾಲು ಸಾಲನೆ ಕರೆದು

ಮಳೆಯನ್ನು ಸುರಿಸುತ್ತ ಕೆರೆಯ ತುಂಬಿಸುದ ಕಂಡು

ವಿಸ್ಮಯವ ತಾಳಿದರು ಆ ಊರ ಜನರು
 
॥ ೩೮ ॥
 
ಗ್ರಾಮಾಧಿಪತಿಯ ಶರಣಾಗತಿ
 

 
ದುರ್ಮಂತ್ರ, ದುಷ್ಕೃತ್ಯ, ದುರಭಿಮಾನವ ತಳೆದ

ದುಷ್ಟರ ಮಾತಿಗೆ ಕಿವಿಗೊಟ್ಟ ಗ್ರಾಮೇಶ

ಮಧ್ವರನು ವಧಿಸುವ ಸಂಚೊಂದ ಹೂಡಿದನು

ಬಳಿಕ ಆ ದುಷ್ಟನು ಮಧ್ವರನು ಕಂಡು

ಸೂರ್ಯನಂತಹ ತೇಜ ಇವರಿಗಿಹುದೆಂದು

ಮಹಿಮರಿಗೆ ನಮಿಸಿದನು ಮೂಕವಿಸ್ಮಿತನಾಗಿ
 
286 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
36
 
37
 
38
 
39
 
॥ ೩೯ ॥