This page has been fully proofread once and needs a second look.

ಕನ್ನೈದಿಲೆ ಸೊಬಗನ್ನು ಮೀರಿಸುವ ಕಾತಿ

ಚಂದಿರನ ಧಿಕ್ಕರಿಪ ತಿಳಿನಗೆಯ ಮೊಗವದು !

ಕಮಲದಂತಿರುವ ಆ ಬೊಗಸೆಗಂಗಳ ಕಾಂತಿ !

ಈ ದಿವ್ಯ ಸೊಬಗುಳ್ಳ ಶ್ರೀ ಕೃಷ್ಣನನ್ನು
 

ಅತಿ ದೀರ್ಘ ಕಾಲದಾ ನಂತರದಿ ಕಂಡು

ಆನಂದ ಹೊಂದಿದನು ಆ ಭೀಮಸೇನ
 
॥ ೩೫ ॥
 
ಮಹಾಗದೆಯ ಹೊಂದಿದ್ದ ಚಂಡರಣನಾಗಿದ್ದ

ಬೃಹದ್ರಥನ ತನಯ ಜರಾಸಂಧನ ಬಳಿಗೆ

ಕೃಷ್ಣಾರ್ಜುನರೊಡಗೂಡಿ ತೆರಳಿದನು ಭೀಮ
 

ಭೀಕರದ ಕಾಳಗದಿ ದೈತ್ಯನನು ಸಂಹರಿಸಿ

ಕೀಚಕಾದಿಗಳೊಡನೆ ಶೌಲ್ರ್ಯದಲ್ಲಿ ಸೆಣಸಿ

ನೆರವಾದ ಧರ್ಮಜಗೆ ರಾಜಸೂಯದಲ್ಲಿ
 
ದೌ
ಲಿ ॥ ೩೬ ॥
 
ದ್ರೌ
ಪದಿಯ ಮುಂಗುರುಳು ಗುಂಗುರಾಗಿಹುದು
 

ಮೃದುವಾದ ಕೂದಲದು ಕಾಳಕಪ್ಪಿನ ಬಣ್ಣ

ಕಡುದುಷ್ಟ ದುಶ್ಯಾಸನನದನೆಳೆದ ಪಾಪಿ

ವೈರಿಗಳ ತರಿವುದಕೆ ಸಾಧನವು ಎಂಬಂತೆ
ದೌ

ದ್ರೌ
ಪದಿಯ ಕೆದರಿದ ಕೇಶರಾಶಿಯ ಭೀಮ

ಒಟ್ಟಾಗಿ ಕಟ್ಟಿದನು ಕೃಷ್ಣಸರ್ಪದ ತೆರದಿ
 
॥ ೩೭ ॥
 
ಪ್ರಜ್ವಲಿಪ ಕಾಳಿಳ್ಗಿಚ್ಚು ವೃಕ್ಷಗಳ ಸುಡುವಂತೆ

ವ್ಯಾಘ್ರ ಸಿಂಹಗಳಂಥ ಮೃಗಗಳನು ಕೊಲುವಂತೆ

ವೈರಿಸಂಹಾರದ ಉದ್ದೇಶದಿಂದಲಿ
ದೈ

ದ್ವೈ
ತ, ಕಾಮ್ಯಕದಲ್ಲಿ ವೃಕೋದರನು ಅಂದು

ಅಗ್ನಿಯೋಪಾದಿಯಲಿ ತೇಜದಲಿ ನಿಂದು

ನಾಶಮಾಡಿದನವನು ಕಿರ್ಮಿಮೀರ ರಕ್ಕಸರ
 
12 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
35
 
36
 
37
 
38
 
॥ ೩೮ ॥