This page has not been fully proofread.

ಕನ್ನೈದಿಲೆ ಸೊಬಗನ್ನು ಮೀರಿಸುವ ಕಾತಿ
ಚಂದಿರನ ಧಿಕ್ಕರಿಪ ತಿಳಿನಗೆಯ ಮೊಗವದು !
ಕಮಲದಂತಿರುವ ಆ ಬೊಗಸಗಂಗಳ ಕಾಂತಿ !
ಈ ದಿವ್ಯ ಸೊಬಗುಳ್ಳ ಶ್ರೀ ಕೃಷ್ಣನನ್ನು
 
ಅತಿ ದೀರ್ಘ ಕಾಲದಾ ನಂತರದಿ ಕಂಡು
ಆನಂದ ಹೊಂದಿದನು ಆ ಭೀಮಸೇನ
 
ಮಹಾಗದೆಯ ಹೊಂದಿದ್ದ ಚಂಡರಣನಾಗಿದ್ದ
ಬೃಹದ್ರಥನ ತನಯ ಜರಾಸಂಧನ ಬಳಿಗೆ
ಕೃಷ್ಣಾರ್ಜುನರೊಡಗೂಡಿ ತೆರಳಿದನು ಭೀಮ
 
ಭೀಕರದ ಕಾಳಗದಿ ದೈತ್ಯನನು ಸಂಹರಿಸಿ
ಕೀಚಕಾದಿಗಳೊಡನೆ ಶೌಲ್ಯದಲ್ಲಿ ಸೆಣಸಿ
ನೆರವಾದ ಧರ್ಮಜಗೆ ರಾಜಸೂಯದಲ್ಲಿ
 
ದೌಪದಿಯ ಮುಂಗುರುಳು ಗುಂಗುರಾಗಿಹುದು
 
ಮೃದುವಾದ ಕೂದಲದು ಕಾಳಕಪ್ಪಿನ ಬಣ್ಣ
ಕಡುದುಷ್ಟ ದುಶ್ಯಾಸನನದನೆಳೆದ ಪಾಪಿ
ವೈರಿಗಳ ತರಿವುದಕೆ ಸಾಧನವು ಎಂಬಂತೆ
ದೌಪದಿಯ ಕೆದರಿದ ಕೇಶರಾಶಿಯ ಭೀಮ
ಒಟ್ಟಾಗಿ ಕಟ್ಟಿದನು ಕೃಷ್ಣಸರ್ಪದ ತೆರದಿ
 
ಪ್ರಜ್ವಲಿಪ ಕಾಳಿಚ್ಚು ವೃಕ್ಷಗಳ ಸುಡುವಂತೆ
ವ್ಯಾಘ್ರ ಸಿಂಹಗಳಂಥ ಮೃಗಗಳನು ಕೊಲುವಂತೆ
ವೈರಿಸಂಹಾರದ ಉದ್ದೇಶದಿಂದಲಿ
ದೈತ, ಕಾಮ್ಯಕದಲ್ಲಿ ವೃಕೋದರನು ಅಂದು
ಅಗ್ನಿಯೋಪಾದಿಯಲಿ ತೇಜದಲಿ ನಿಂದು
ನಾಶಮಾಡಿದನವನು ಕಿರ್ಮಿರ ರಕ್ಕಸರ
 
12 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
35
 
36
 
37
 
38