This page has been fully proofread once and needs a second look.

ದುಷ್ಟ ವರ್ತನೆಯಲ್ಲಿ ನಿಪುಣ ಆ ಕ್ರೂರಿ

ಬೆವರನ್ನು ಸುರಿಸುತ್ತ ಕಠಿಣ ಶ್ರಮ ಪಟ್ಟರೂ

ಮಧ್ವರಾ ಪ್ರವಚನವು ಮತ್ತಷ್ಟು ಶೋಭಿಸಿತು

ಮತ್ತೊಮ್ಮೆ ಮಧ್ವರಾ ಅಂಗುಲಿಯನಾತ

ಹಿಡಿದೆತ್ತಿ ನಿಲಿಸಲು ಸಂಪೂರ್ಣ ಸೋತನು

ಇದರಿಂದ ಮಂದಿಯಲಿ ಅಚ್ಚರಿಯು ಹೆಚ್ಚಿತು
 
॥ ೩೨ ॥
 
ಶಿವಾಗಿಗ್ನಿ ಮೊದಲಾದವರ ಪರಾಭವ
 

 
ಅಪ್ರತಿಮ ಸಾಮರ್ಥ್ಯ ಪಡೆದಿದ್ದ ಮಧ್ವರನು

ಶಿವಾಗ್ನಿ ಮುಂತಾದ ಹಲವಾರು ಬ್ರಾಹ್ಮಣರು

ಪ್ರಬಲ ಯತ್ನಗಳಿಂದ ಒರೆಯಿಟ್ಟು ನೋಡಿದರು

ಮಧ್ವರಾ ಸಾಮರ್ಥ್ಯ ಅವರು ಮನಗಂಡರು

ದ್ವಾಪರದಿ ಶೌರ್ಯ ಪ್ರತಾಪಗಳ ನೆಲೆಯಾದ

ಭೀಮನೇ ಇವರೆಂದು ಅವರೆಲ್ಲ ನುಡಿದರು
 
॥ ೩೩ ॥
 
ಅತಿ ಶಕ್ತರಾದಂಥ ಹಲವಾರು ಮಂದಿ

ಚಿಮ್ಮಟದ ನೆರವಿಂದ ಮಧ್ವರಾ ರೋಮಗಳ

ಬುಡದಿಂದ ಕೀಳಲು ಯತ್ನಿಸಿದರಾದರೂ

ಒಂದು ಕೂದಲಿನೆಳೆಯೂ ಕಿತ್ತು ಬರಲಿಲ್ಲ

ಮೃದುವಾದ ನಾಸಿಕಕೆ ಮುಷ್ಟಿ ಅಪ್ಪಳಿಸಿದರೂ

ಮಧ್ವಮುಖ ಚಂದಿರನು ಕಳೆಗುಂದಲಿಲ್ಲ
 
॥ ೩೪ ॥
 
ನಾಯಿಗಳ ಗುಂಪಿನಲ್ಲಿ ಸಿಂಹ ವರ್ತಿಸುವಂತೆ
 

ಶತೃಗಳ ಎದುರಿನಲಿ ದರ್ಪವನು ತೋರಿದರು

ಅಲ್ಪನದಿಗಳ ಕೂಡೆ ಸಾಗರವು ನಡೆವಂತೆ

ಸಾತ್ವಿಕರ ಜೊತೆಯಲ್ಲಿ ಮಧ್ವಮುನಿ ನಡೆದರು

ಮಿಂಚು ಹುಳುಗಳ ಜೊತೆಗೆ ಸೂರ್ಯನಾ ತರದಲ್ಲಿ
ತೆರದಲ್ಲಿ
ರಾಜಸದ ಗುಣವುಳ್ಳ ಮಂದಿಯನು ಕಂಡರು
 
ಹದಿನಾರನಯ ಸರ್ಗ / 285
 
32
 
33
 
34
 
35
 
॥ ೩೫ ॥