This page has been fully proofread once and needs a second look.

ಸೋದರರು ಬಳಲುತ್ತ ಬಸವಳಿದು ಬೆವರಿದರು

ಕ್ರಮವಾಗಿ ಸಾಮರ್ಥ್ಯ ಉಡುಗುತ್ತ ಬಂದಿತು

ಗುರುಗಳಾಣತಿಯಂತೆ ಮಧ್ವ ಶಿಷ್ಯರಲ್ಲೊಬ್ಬ
 

ಬೀಸಣಿಕೆಯಿಂದವರ ಉಪಚರಿಸತೊಡಗಿದ
 

ಕಠಿಣತಮ ತ್ವಚೆಯುಳ್ಳ ಮಧ್ವರ ಕಂಠವನು

ಹಿಡಿದುಕೊಳ್ಳಲು ಸೋತು ಇಬ್ಬರೂ ಬಿದ್ದರು
 
॥ ೨೮ ॥
 
ಗರ್ವವಿನ್ನೂ ಉಳಿದ ಆ ಸೋದರರು ಇಬ್ಬರೂ

ಶ್ರಮ ನಿವಾರಿಸಿಕೊಂಡು ಕುಳಿತ ಬಳಿಕ

ಮಧ್ವರಾ ಈರ್ವರಿಗೆ ಮತ್ತೊಂದು ವಿಧಿಸಿದರು

ನೆಲದಲ್ಲಿ ಊರಿರುವ ತಮ್ಮ ಅಂಗುಲಿಯನ್ನು

ಮೇಲೆತ್ತಬೇಕೆಂದು ಆಣತಿಯನಿತ್ತರು

ಅವರೆಷ್ಟು ತಿಣುಕಿದರೂ ಬೆರಳು ಅಲುಗಲೇ ಇಲ್ಲ
 
॥ ೨೯ ॥
 
ವಟುವಿನ ಮೇಲೆ ಕುಳಿತು ಪ್ರದಕ್ಷಿಣೆ ಮಾಡಿದ್ದು

 
ಇಂತಹ ಬಲಶಾಲಿ ಆಚಾರ್ಯರೊಮ್ಮೆ

ವಟುವೊಬ್ಬನನು ಕರೆದು ಕಿರುನಗೆಯ ಸೂಸುತ್ತ

ಶ್ರಮವಾಗದಂತವನ ಹೆಗಲನೇರುತ್ತ

ನರಸಿಂಹ ಮಂದಿರವ ಸುತ್ತು ಹಾಕಿದರು

ಈ ಬಗೆಯ ಲಘಿಮಾದಿ ಐಸಿರಿಗಳಿಂದ

ತ್ರಿಭುವನದ ರತ್ನಗಳ ರಾಜನೆನಿಸಿದರು
 
॥ ೩೦ ॥
 
ಪೂರ್ವವಾಟ ಪರಾಜಯ
 

 
ಪೂರ್ವ ವಾಟ ಎಂಬ ಮತ್ತೊಬ್ಬ ಬಲಶಾಲಿ

ಅರ್ಧ ಶತ ರಾಜಭಟರೆತ್ತಿ ತಂದಿರಿಸಿದ್ದ

ಏಣಿಯೊಂದನು ತಾನು ಒಬ್ಬನೇ ಹೊತ್ತಿದ್ದ

ಇಂತಹ ಬಲಶಾಲಿ, ದುಷ್ಟರಾಣತಿಯಂತೆ

ಮಧ್ವಮುನಿ ಪ್ರವಚನವ ತಡೆಹಿಡಿಯಲೆಂದು

ಅವರ ಗಂಟಲ ಹಿಡಿದು, ಅದುಮತೊಡಗಿದನು
 
284 / ಶ್ರೀ ಸುಮಧ್ಯ ವಿಜಯ ಕನ್ನಡ ಕಾವ್ಯ
 
28
 
29
 
30
 
31
 
॥ ೩೧ ॥