This page has been fully proofread once and needs a second look.

ಮಧ್ವರಾಯರ ಮಹಿಮೆ ಇಂತು ಅಸದೃಶವಹುದು

ಇತರರಿಗೆ ಸಾಧ್ಯವೆ ಇಂಥ ಸಾಹಸವು ?

ಆದರೂ ದುರ್ಜನರು ಮಧ್ವರ ಬಗೆಗೆ

ಈರ್ಪೈಯನ್ಷ್ಯೆಯನು ಸ್ಥಿರವಾಗಿ ತಳೆಯುತ್ತಲೇ ಇದ್ದರು

ಗುರುಗಳಲ್ಲಿ ದ್ವೇಷವನ್ನು ಸಾಧಿಸುತ್ತಲೇ ಇದ್ದರು

ಭಾಗ್ಯ ಹೀನರಿಗಿಂಥ ವರ್ತನೆಯು ಸಹಜ
 
॥ ೨೪ ॥
 
ಗಂಡವಾಟ ಪರಾಜಯ
 

 
ಅಲ್ಪ ಸೇವೆಯನೀತ ಸಲ್ಲಿಸಲು ಬಂದಿಹನು

ಎಂಬಂಥ ನುಡಿಯಿಂದ ಅಲ್ಲಿನಾ ಕೆಲಜನರು

ಮಧ್ವರಾ ಶಕ್ತಿಯನ್ನು ಪರಿಕಿಸಲು ಬಯಸುತ್ತ

ಗಂಡವಾಟ ಎಂಬ ಮತ್ತೊಬ್ಬ ದುಷ್ಟನನು

ಸೋದರನ ಸಹಿತ ಎದುರಲ್ಲಿ ನಿಲ್ಲಿಸಿದರು

ಮಧ್ವರಾಗಳುಕದೆ ಬಲವ ತೋರೆಂದವಗೆ ಆದೇಶಿಸಿದರು
 
॥ ೨೫ ॥
 
ಗಂಡವಾಟನು ತುಂಬ ಬಲಶಾಲಿಯಾದವನು
 

ಶ್ರೀ ಕಾಂತ ದೇಗುಲದ ಮೂವತ್ತು ಮಂದಿ

ಒಟ್ಟಾಗಿ ತಂದಿದ್ದ ಬಾವುಟದ ಕಂಬವನು

ಒಬ್ಬನೇ ಎತ್ತಿಟ್ಟು ಕಿರುನಗೆಯ ಬೀರಿದ್ದ

ಗದೆಯೊಂದನಪ್ಪಳಸಿ ತೆಂಗಿನ ಮರದಿಂದ

ಫಲಗಳನ್ನು ಉದುರಿಸಿ ಸೈ ಎನಿಸಿಕೊಂಡಿದ್ದ
 
॥ ೨೬ ॥
 
ಇಂತಹ ಬಲಶಾಲಿ ಗಂಡವಾಟನು ಆಗ
 

ತನ್ನ ಜೊತೆಯಲ್ಲವನ ಅಣ್ಣನನ್ನೂ ಸೇರಿಸಿ

ಮಧ್ವರ ಕಂಠವನು ಬಲವಾಗಿ ಹಿಡಿದು

ಎಡೆಬಿಡದೆ ಅದುಮುತ್ತ ಸಾಹಸವಗೈದರು

ಆದರವರಾ ಯತ್ನ ಅತಿ ವಿಫಲವಾಯ್ತು

ಮಧ್ವರಾ ಕಂಠವು ಮತ್ತಷ್ಟು ಬಲವಾಯ್ತು
 
ಹದಿನಾರನೆಯ ಸರ್ಗ / 283
 
24
 
25
 
26
 
27
 
॥ ೨೭ ॥