This page has been fully proofread once and needs a second look.

ಸಾಗರದ ತೆರೆಗಳು ಅತ್ಯಂತ ಪ್ರಬಲ

ಸಾಮಾನ್ಯ ಜನರಿಗದು ಎದುರಿಸಲಸಾಧ್ಯ

ಈ ತರಂಗಗಳೆಲ್ಲ ಮಂದಿಯನು ಅಪ್ಪಳಿಸಿ

ಕರಿನಿಕರ ಧಾಳಿಗೆ ತುತ್ತಾದ ತೆರದಲ್ಲಿ

ಆಕ್ರಾಂತರಾಗಿದ್ದ ಭಯ ಭೀತ ಜನರನ್ನು

ಅಪಹಾಸ್ಯ ಮಾಡಿದರು ಇತರ ಜನರೆಲ್ಲ
 
॥ ೨೦ ॥
 
ಅಲ್ಲಿದ್ದ ದುರ್ಜನಕೆ ಇದು ಮೋಜ ನೀಡಿತು

ಮಜ್ಜನದ ಸಮಯದಲ್ಲಿ ಸಾಗರ ತರಂಗಗಳು

ಆವರಿಸಿದಾ ಮಧ್ವಮುನಿಗಳನ್ನು ಕಂಡು

ಲೋಕ ಪೂಜಿತರೆಂಬ ಈ ಪರಮ ಗುರುಗಳು

ಸಾಗರದ ತೆರೆಗಳಿಗೆ ತತ್ತರಿಸಿ ಹೋಗಿಹರು

ಇಂತೆಂದು ದುರ್ಜನರು ಪರಿಹಾಸ್ಯ ಮಾಡಿದರು
 
॥ ೨೧ ॥
 
ಇಂತಹ ಮಾತುಗಳು ಸಾಮಾನ್ಯ ಮಂದಿಗೆ

ಮನಕೆ ಅತಿಯಾದ ಶೋಕ್ಷೋಭೆಯನು ನೀಡುವುದು

ಆದರಾ ಮಧ್ವಮುನಿ ಪರಿಪೂರ್ಣ ಪ್ರಜ್ಞರು

ನೀಚರಾ ನುಡಿಯನ್ನು ಗಮನಿಸಲೇ ಇಲ್ಲ
 

ನರಿ ಊಳುವಿಕೆಗಳಿಗೆ ನಾಯಿ ಬೆದರುವುದು

ಸಿಂಹಕ್ಕೆ ಲವಲೇಶ ಕ್ಷೇಶ ಇದರಿಂದಿಲ್ಲ
 
॥ ೨೨ ॥
 
ಸಮುದ್ರ ತಟಾಕದಂತಾಯಿತು
 

 
ಮಧ್ವಮುನಿಗಳ ನೋಟ ಪರಮ ಪಾವನವಹುದು

ಸಕಲ ಲೋಕಕೆ ಜನ್ಮ, ಸ್ಥಿತಿ, ಲಯವ ನೀಡುವುದು

ಅಂಬುಧಿಯ ಕಡೆಗವರು ಕುಡಿನೋಟ ಬೀರಿದರು

ಆ ಕಟಾಕ್ಷವು ಆಗ ದಿವ್ಯತೆಯ ಪಡೆಯಿತು

ಇದರಿಂದ ಸಾಗರವು ಚಲನೆಯನೇ ತೊರೆದು

ಪ್ರಕ್ಷುಬ್ಧವಾಗಿರದ ಪುಷ್ಕರಣಿಯಂತಾಯ್ತು
 
282 / ಶ್ರೀ ಸುಮಧ್ಯ ವಿಜಯ ಕನ್ನಡ ಕಾವ್ಯ
 
20
 
21
 
22
 
23
 
॥ ೨೩ ॥