This page has been fully proofread once and needs a second look.

ಅಂಬುಧಿಯ ದೃಧೃತಗತಿಯ ಅಲೆಗಳೆಂಬುವ ಹಸ್ತ

ತೊಳೆದಿಹವು ತಟವನ್ನು ಅತಿ ಸ್ವಚ್ಛವಾಗಿ
 

ಇಂತಹ ತಟವೆಂಬ ಆಸನದ ಮೇಲೆ

ಆನಂದ ತೀರ್ಥರು ಆಸೀನರಾಗಿ

ಐತರೇಯದ ಸೂಕ್ತ ಅತಿ ರಮ್ಯವಾಗಿ

ವ್ಯಾಖ್ಯಾನ ಮಾಡಿದರು ಅತಿ ದೀರ್ಘವಾಗಿ
 
॥ ೧೬ ॥
 
ಗಾಂಭೀರ್ಯ ಪಡೆದಿರುವ ಇವರ ಈ ಧ್ವನಿಯು

ಸಿಂಧುವಿನ ದನಿಯನ್ನು ಮೀರಿಸುತ್ತಿಹುದು!

ಸುಶ್ರಾವ್ಯವೀ ದನಿಯು, ಅತಿ ಮಧುರವಹುದು

ಪೂರ್ಣಚಂದ್ರನ ಕಾಂತಿ ಮೊಗವುಳ್ಳ ರೀತಿ

ಯಾರೆಂದು ತವಕಿಸುತ, ಅಚ್ಚರಿಯ ಸೂಸುತ್ತ

ಜನಜಲಧಿ ಅವರೆಡೆಗೆ ತ್ವರೆಯಿಂದ ಧಾವಿಸಿತು
 
॥ ೧೭ ॥
 
ಮಧ್ವಮುನಿಗಳ ವೇದ ವ್ಯಾಖ್ಯಾನವನ್ನು

ಅಚ್ಚರಿಯೊಳಾಲಿಸುತ ಕೈಜೋಡಿಸುತ್ತ

ಮಧ್ವರಿಗೆ ವಂದಿಸುತ ಬಳಿಕ ಇಂತಂದರು
ತೆಂದರು
"ವೇದ ಭಾವವನುಚಿತ ರೀತಿಯಲ್ಲಿ ತಿಳಿಸುವ

ಮಧ್ವರನು ದುರ್ಜನರು ಶೃತಿವೈರಿ ಎನುವರು

ಧಿಕ್ಕಾರ, ಧಿಕ್ಕಾರ ಇಂತಹ ಜನಕೆ "
 
॥ ೧೮ ॥
 
ಆನಂದ ತೀರ್ಥರಿಗೆ ಆ ವಿಪ್ರವೃಂದವು

ಭಕ್ತಿಯಿಂದಲಿ ತಮ್ಮ ಗೌರವವ ತೋರಿಸುತ

ಅವರ ಪದಧೂಳಿಯನು ಶಿರದಲ್ಲಿ ಧರಿಸಿತು

ಆನಂದ ತೀರ್ಥರ ಮಜ್ಜನದ ಪರಿಣಾಮ

ಅಧಿಕತಮ ಪಾವಿತ್ರ್ಯ<error> ಹೊಂದದ</error><fix>ಹೊಂದಿದ</fix> ಸಾಗರದಿ
 

ವಿಹಿತ ಕಾಲದಿ ಮಂದಿ ಮುದಗೊಂಡು ಮಿಂದರು
 
ಹದಿನಾರನಯ ಸರ್ಗ /281
 
16
 
17
 
18
 
19
 
॥ ೧೯ ॥