This page has been fully proofread once and needs a second look.

ಪರಿವಾರ ಸಹಿತ ಬಂದರಾ ಮಧ್ವರು

ಅವರನ್ನು ಕಾಣುತ್ತ ಸಜ್ಜನರು ಎಲ್ಲ

ಮಂದಹಾಸದ ಮೊಗದ ಫುಲ್ಲಾಕ್ಷರಾದರು

ದುರ್ಜನರು ದುರ್ಮುಖದ ಬಿಗುಮಾನ ಬೀರುತ್ತ

ಆನಂದ ತೀರ್ಥರನು ನಿಂದಿಸಲು ತೊಡಗಿದರು

ಅವರವರ ಭಾವಕ್ಕೆ ತಕ್ಕಂಥ ವರ್ತನೆ!
 
॥ ೧೨ ॥
 
"ವಿಶ್ವಗುರು ಮಧ್ವರನು ನಿಂದಿಪುದು ಸಲ್ಲ"

ಎಂದು ಧಿಕ್ಕರಿಸುತ್ತ ದುರ್ಜನಕೆ ಶಿಕ್ಷೆಯನು

ಈಯಲೋಸುಗವೋ ಎಂದು
 

ಘನ ಘೋಷದ ಘೋರ ವೇಷದಲಿ ನಿಂದು

ಸಂಶೋಕ್ಷೋಭೆ, ಸಂರಂಭ, ಸಂತಾಪ ತೋರಿಸುತ

ಖಲದಮನನಂತೆ ಆ ಸಿಂಧುರಾಜನು ಬಂದ
 
॥ ೧೩ ॥
 
ಅಮಿತ ಸಮ್ಮೇಮೋದದಲಿ ಚಂಚಲವು ಆ ಸಿಂಧು
ದೃ

ಧೃ
ತಗತಿಯ ಚಲನೆಯಲಿ ಗಂಭೀರ ದನಿಯಲ್ಲಿ

ಸ್ತುತಿಸಿ ಪಾಡುವ ಮಧುರ ಇಂಚರದ ತೆರದಲ್ಲಿ

ನೊರೆಯೆಂಬ ತಿಳಿನಗೆಯ ಮೃದುಮಧುರ ಲಾಸ್ಯದಲಿ

ತೆರೆಗಳೆಂಬುವ ತನ್ನ ಅಯವಗಳಿಂದಲಿ

ಮಧ್ವರಿಗೆ ನಮಿಸುವ ಮಯಲ್ಲಿ ತೋರಿತ್ತು
 
॥ ೧೪ ॥
 
ಸಿಂಧುರಾಜನ ಜೊತೆಗೆ ಆನಂದ ತೀರ್ಥರು

ಗಾಂಭೀರ್ಯ, ವಾಕ್ಯುಕು, ಜಲಲೀಲೆಯಂತಹ

ವಿವಿಧ ಗುಣರತ್ನಗಳ ಒಡೆಯರು ತಾವಾಗಿ

ಈರ್ವರಾ ಒಡನಾಟ ಅತಿಯಾಗಿ ಶೋಭಿಸಿತು

ಮಧ್ವರಾ ಲಾವಣ್ಯ ಜನಕೆ ಅತಿ ಪ್ರಿಯವಹುದು

ಜಲಧಿಯ ಲವಣತ್ವ, ಜನಕೆ ಓಕರಿಕೆ !
 
280 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
12
 
13
 
14
 
15
 
॥ ೧೫ ॥