This page has not been fully proofread.

"ಈ ಬಂಡೆ ನೀವೆಲ್ಲ ಸರಿಯಾಗಿ ಇರಿಸಿದರೆ
ಅತಿಯಾದ ಉಪಕಾರ ಜನಗಳಿಗೆ ಆಗುವುದು''
ಎಂಬ ಈ ಮಾತನ್ನು ಆಲಿಸಿದ ಆ ಜನರು
"ಓ ಗುರುವೆ! ಮನುಜರಿಗೆ ಇದು ಸಾಧ್ಯವಿಲ್ಲ
ಭೀಮನಾದರೂ ಈ ಕೆಲಸ ಯತ್ನಿಸಿದರೆ
ಆಗಲೂ ಸಾಧ್ಯವೋ ಹೇಳುವಂತಿಲ್ಲ"
 
ಹನುಮಾವತಾರದಲಿ ತಾವಂದು ತ್ರೇತೆಯಲಿ
ಗಂಧಮಾದನಗಿರಿಯ ಎಂತು ಹೊತ್ತಿದ್ದರೋ
ಅಂತೆಯೇ ಗುರುಮಧ್ವರಾಯರು ಇಂದು
ಸುಲಲಿತ ಶೈಲಿಯಲ್ಲಿ ಅತಿ ಸುಲಭವಾಗಿ
ಬಂಡೆಯನು ಕರಕಮಲದಲ್ಲಿರಿಸಿಕೊಂಡು
ನದಿಯ ಬಳಿ ಇರಿಸಿದರು ಉಚಿತ ಸ್ಥಳದಲ್ಲಿ
 
ಸೂರ್ಯಗ್ರಹಣ ಕಾಲದಲ್ಲಿ ನಡೆದ ಸಮುದ್ರಸ್ನಾನದ ಪ್ರಸಂಗ
 
ಸೂರ್ಯ ಚಂದ್ರರು ಕೂಡಿ ಇರುವ ತಿಥಿಯಂದು
ಯತಿ, ಗೃಹಸ್ಥರು ಮುಂತಾದ ಶಿಷ್ಯರುಗಳಿಂದ
ಶಾಸ್ತ್ರಾರ್ಥ ವಿಷಯಗಳ ಚರ್ಚೆಯಲ್ಲಿ ಶೋಭಿಸಿದ
ಮಾರ್ಗದಲಿ ನಡೆಯುತ್ತ ಆನಂದ ತೀರ್ಥರು
ಗ್ರಹಣದ ಕಾಲದಲ್ಲಿ ಸ್ನಾನದ ಸಲುವಾಗಿ
ಕಡಲಿನ ತೀರಕ್ಕೆ ತ್ವರಿತದಲಿ ನಡೆದರು.
 
ಕಣ್ವಮುನಿಯೆಂಬುವ ಅತಿಶ್ರೇಷ್ಠ ವಿಪ್ರರಿಗೆ
ಅತ್ಯಂತ ಪ್ರಿಯವಾದ ಕಣ್ವತೀರ್ಥದಿ ಮಿಂದು
ಆ ಗ್ರಾಮದಲ್ಲಿ ನೆಲೆಸಿದ್ದ ಆದ್ರ್ರಾಂಗರಾಗಿದ್ದ
ಬಾಲಕರು, ವೃದ್ಧರು, ಮತ್ತೆಲ್ಲ ವಯಸವರು
ಗ್ರಹಣ ಮೋಕ್ಷದ ಸಮಯ ಸ್ನಾನವನ್ನು ಮಾಡಿ
ಮಧ್ವರಾಗಮನಕ್ಕೆ ಮುಂಚಿತವೇ ಬಂದರು
 
ಹದಿನಾರನೆಯ /279
 
8
 
10
 
11