This page has been fully proofread once and needs a second look.

ಶ್ರೀ ಗುರುಭೋಭ್ಯೋ ನಮ:
 

 
ಹದಿನಾರನೆಯ ಸರ್ಗ
 

 
ಮತ್ತೊಬ್ಬ ಮಧ್ಶಿಷ್ಯರಿಂದ ಮಹಿಮಾ ವರ್ಣನ

 
ಇಂತಿರಲು ಒಮ್ಮೆ ಮಧ್ವಮುನಿ ಶಿಷ್ಯನು

ಮಧುಮಥನ<error> ಅಂಫ್ರಿಯಲ್</error><fix>ಅಂಘ್ರಿ</fix>ಯಲಿ ಭಕ್ತಿಯನ್ನು ಹೊಂದಿದ್ದ

ವೇದ ಪಾಠಕರಾದ ಸಜ್ಜನರ ವೃಂದಕ್ಕೆ
 

ಆನಂದ ತೀರ್ಥರ ಅತಿಶಯದ ಮಹಿಮೆಯನು

ಬಂಧಗಳ ಬಿಡಿಸುವ, ಮೋಕ್ಷವನು ಕರುಣಿಸುವ

ವೇದಾಂತ ಶಾಸ್ತ್ರವೋ ಎಂಬಂತೆ ನುಡಿದನು
 
॥ ೧ ॥
 
ಗೋಮತೀ ತೀರದಲ್ಲಿ ವೇದ ಪ್ರಾಮಾಣ್ಯ ಸ್ಥಾಪನೆ
 

 
ಶೃತಿಗಳನು ದ್ವೇಷಿಸುವ ವಾಚಾಲನೊಬ್ಬನು

ಗೋಮತೀ ತೀರದ ಬಳಿಯಲ್ಲಿ ಇದ್ದವನು

ಅಂತ್ಯ ವರ್ಣಜನಾದ ಕ್ಷಿತಿಪತಿಯು ಅವನು

ಕೀರ್ತಿಯೆಂಬುವ ಧವಳ ಚಂದ್ರನನ್ನು ಪಡೆದಿದ್ದ

ಶೃತಿಗುಣದ ಸಾಧಕರೂ ಕುಶಲ ವಾಗ್ನಿಮಿಗಳೂ ಆದ

ಆನಂದ ತೀರ್ಥರನು ಕುರಿತು ಇಂತೆಂದನು
 
॥ ೨ ॥
 
"ವೇದವಾಕ್ಯಗಳುಂಟು ಸಾವಿರದ ನೂರಾರು

ವಾಕ್ಯವೊಂದರ ಫಲವು ಸಿದ್ಧಿಸದೆ ಹೋದರೂ

ಸಟೆಯಾಗುವುದು ಅದು ಮಾತಿನಂತೆ

ಸಕಲ ಶೃತಿವಚನಗಳ ಪ್ರಾಮಾಣ್ಯ ದೋಷಕ್ಕೆ

ಇಂತಹ ವಚನಗಳು ದೃಷ್ಟಾಂತವಾಗುವುವು
"
ಎಂಬಂಥ ಮಾತುಗಳ ಆತ ನುಡಿಯುತಲಿರಲು
 
1
 
2
 
3
 
॥ ೩ ॥