This page has been fully proofread once and needs a second look.

ಪಂಡಿತ್ತೋತ್ತಮರಾದ ಆ ಲಿಕುಚ ಶೇಖರರು
 
ಪಂಡಿತೋತ್ತಮರಾದ

ಶಿಷ್ಯರೆಂಬುವ ಹೊಲದಿ ಸದ್ವಿದ್ಯೆಯನ್ನು ಬಿತ್ತು

ಆ ಕಾರ್ಯದಲ್ಲಿಯೇ ಹಗಲಿರುಳು ಕಳೆದು

ಗುರುಮಧ್ವರಾದೇಶ ಅನವರುರತ ಸ್ಮರಿಸಿದರು
 
॥ ೧೩೬ ॥
 
ನಾಲ್ಕು ವರ್ಣದ ಜನಕೆ, ಗ್ರಾಮಾಧಿಪತಿಗಳಿಗೆ

ಶಿಷ್ಟ ರಕ್ಷಣದಿಂದ ಪರಮ ಪದ ದೊರೆಯುವುದು

ಇಂತು ಆ ಗುರುಗಳಲ್ಲಿ ಎಲ್ಲ ವರ್ಣದ ಜನರೂ

ಶಿಷ್ಯತ್ವ ವಹಿಸುತ್ತ ಅರಸಿದರು ಮುಕ್ತಿಯನ್ನು
 
ನು ॥ ೧೩೭ ॥
 
ಆಚಾರ್ಯರು ಮಾಡಿದ ಅನುಗ್ರಹ
 

 
ಶ್ರೀ
 
ರಾಮನ ಪ್ರಿಯರು ಶ್ರೀ ಮಧ್ವಮುನಿಗಳು

ಶ್ರೀ ರಾಮನಾ ತೆರದಿ ಪರಿಚರ್ಯ, ದೀಕ್ಷೆ

ಭಕ್ತಿಯೇ ಮೊದಲಾದ ಸದ್ಗುಣದ ಸಜ್ಜನಕ್ಕೆ

ಯೋಗಿ ದುರ್ಲಭವಾದ ಗತಿಯನ್ನು ಕರುಣಿಸಿದರು
 
॥ ೧೩೮ ॥
 
ಯಾವ ಗುರು ಕರುಣೆಯಲಿ ಶಿಷ್ಯ ಪ್ರಶಿಷ್ಯರ

ಸಾಮರ್ಥ್ಯ ಪ್ರತಿಭೆಗಳು ಖ್ಯಾತಿಯನ್ನು ಪೊಂದಿದವೋ

ಸುಲಭದ ಭಕುತಿಗೆ ಅತಿ ಸುಲಭರೆನಿಸುವ

ಮಧ್ವಪದ ಸುರ ತರುವ ಬಯಸದವ ಯಾರು ?
 
॥ ೧೩೯ ॥
 
ಏಕವಾಟದಲ್ಲಿ ಚಾತುರ್ಮಾಸ್ಯ
 

 
ಆಷಾಢ ಶುಕ್ಲದ ಹನ್ನೊಂದನೆಯ ದಿನದಂದು

ಶ್ರೀ ಶೇಷಶಯನನು ಶಯನವನು ಮಾಡಲು

ಸಕಲ ಸಜ್ಜನರೆಲ್ಲ ಪೂಜಿಸುವ ಮಧ್ವರು

ಕಣ್ವ ತೀರ್ಥದ ಮೇಲೆ ಬೀಸುವ ಗಾಳಿಯಲಿ

ಪರಮ ಪಾವನ ತಾಂತ್ರ್ಯ ಗ್ರಾಮದ ಮಠದಲ್ಲಿ
 

 

ಭಕ್ತಿ ವಾತ್ಸಲ್ಯದಲ್ಲಿ ವಾಸ್ತವ್ಯ ಹೂಡಿದರು
 
272/ಶ್ರೀ ಸುಮಧ್ಯ ವಿಜಯ ಕನ್ನಡ ಕಾವ್ಯ
 
136
 
137
 
138
 
139
 
140
 
॥ ೧೪೦ ॥