This page has been fully proofread once and needs a second look.

ಮಧ್ವಮುನಿಗಳ ಶಿಷ್ಯ ಸಂಕುಲಗಳೆಲ್ಲ

ಧರಗಿಳಿದ ಸೂರ್ಯರೊ ಎಂಬಂತೆ ಬೆಳಗುತ್ತ

ತಮ್ಮ ಪದರಜದಿಂದ <error>ಬುವಿಯ</error><fix>ಭುವಿಯ</fix> ಪಾವನ ಮಾಡಿ

ದುರ್ಮತದ ತಿಮಿರವನು ನಾಶಮಾಡಿದರು
 
॥ ೧೩೦ ॥
 
ಮೋಕ್ಷಶಾಸ್ತ್ರದ ಕ್ಷೀರ ಸಾಗರದಿ ಮುಳುಗುತ್ತ

ನಿತ್ಯ ಸುಖಪೂರ್ಣರು ಆ ಮಧ್ವ ಶಿಷ್ಯರು

ಶ್ರೀ ಹರಿಯ ಅಪ್ರತಿಮ ಪ್ರತಿಮೆಗಳ ಪೂಜಿಸುತ

ಚಕ್ರಪಾಣಿಯ ಚರಣ ಸೇವೆಯಲ್ಲಿ ನಿರತರು
 
॥ ೧೩೧ ॥
 
ಮಧ್ವಮುನಿ ಶಿಷ್ಯಗಣ ಬಹುವಾಗಿ ಬೆಳೆಯಿತು

ಮಧ್ವರಾ ಶಿಷ್ಯರು ಮತ್ತವರ ಶಿಷ್ಯರು, ಅವರ ಪ್ರಶಿಷ್ಯರು

ಹರಿಭಕ್ತಿ ವೈರಾಗ್ಯ ಗುಣದಿಂದ ಭೂಷಿತರು
 

ಜಗದಗಲ ಪಸರಿಸುತ <error>ಬುವಿ</error><fix>ಭುವಿ</fix>ಯಲಂಕರಿಸಿದರು
 
॥ ೧೩೨ ॥
 
ಸರ್ವದಾ ಸಕಲ ಸಚ್ಛಾಸ್ತ್ರ ವ್ಯಾಖ್ಯೆಗಳು

ಇದರಿಂದ ಲಭಿಸುವ ಸೌಖ್ಯ ಸಾಗರದಲ್ಲಿ

ಆ ಶಿಷ್ಯರೆಲ್ಲರೂ ವಿಹರಿಸುತ್ತಿದ್ದರು

ದುರ್ವಚನ ಖಂಡಿಸುತ ಸಚ್ಛಾಸ್ತ್ರ ಸಾರಿದರು
 
॥ ೧೩೩ ॥
 
ಮಧ್ವರಾ ಶಿಷ್ಯ ಪ್ರಶಿಷ್ಯರಲಿ ಕೆಲರು
 

ಅಲ್ಪ ಶ್ರವಣವ ಮಾಡಿ ಭಕ್ತಿಯನ್ನು ತಳೆದವರು

ಅಲ್ಪ ಬುದ್ಧಿಯ ಕೆಲರು ಶಾಸ್ತ್ರಗಳ ಶ್ರವಣವನು

ಬಹು ಬಾರಿ ಮಾಡುತ್ತ ಸಾರ್ಥಕ್ಯ ಪಡೆದವರು
 
॥ ೧೩೪ ॥
 
ಗೃಹಸ್ಥ ಶಿಷ್ಯರು
 

 
ಮಧ್ವಮುನಿ ಶಿಷ್ಯರಲಿ ಸಂಸಾರಿ ಹಲವರು
 

ಗುರುಗಳ ಅಪರಿಮಿತ ಕರುಣೆಯನು ಪಡೆದವರು
 

ಲಿಕುಚ ವಂಶೋದ್ಭವರಾದ ಮೂರು ಮಹನೀಯರು

ತ್ರೇತಾಗ್ನಿ ಯಂದದ ತೇಜವನು ಪಡೆದವರು
 
ಹದಿನೈದನೆಯ ಸರ್ಗ / 271
 
130
 
131
 
132
 
133
 
134
 
135
 
॥ ೧೩೫ ॥