This page has been fully proofread once and needs a second look.

ಮದಿಸಿದ ದುರ್ವಾದಿ ಮಾತಂಗ ನಿವಹದ
 

ಯುಕ್ತಿ ಎಂಬುವ ಕುಂಭ ಸ್ಥಳಗಳನ್ನು ಸೀಳುವ

ಕೇಸರಿಯ ತೆರದಲ್ಲಿ ಆ ಪದ್ಮನಾಭರು

ವೇದಾಂತ ತತ್ವವನು ಎಲ್ಲೆಲ್ಲೂ ಹರಡಿದರು
 
॥ ೧೨೪ ॥
 
ಮಧ್ವರಾ ಕೃತಿರತ್ನ ಅನುವ್ಯಾಖ್ಯಾನಕೆ

ಜ್ಞಾನಸಾಗರರಾದ ಶ್ರೀ ಪದ್ಮನಾಭರು
ಸಾ

ಸನ್ನ್ಯಾ
ಯ ರತ್ನಾವಲಿ ಎಂಬ ಟೀಕೆಯನ್ನು ಬರೆದು

ಬೆಲೆಯಿರದ ರತ್ನಗಳ ಮಾಲೆಯನು ರಚಿಸಿದರು
 
॥ ೧೨೫ ॥
 
ವೇದಾದಿ ಪ್ರವಚನಕೆ ಆಚಾರ್ಯರಾಗಿರುವ

ಗುರು ಮಧ್ವರ ಶಿಷ್ಯರಗ್ರಣಿಯು ಇವರೆಂದು

ಎಲ್ಲೆಲ್ಲೂ ಮಾನ್ಯರು ಶ್ರೀ ಪದ್ಮನಾಭರು

ವೇದ ವ್ಯಾಖ್ಯಾನವನ್ನು ಸಭೆಗಳಲ್ಲಿ ಮಾಡಿದರು
 
L
 
॥ ೧೨೬ ॥
 
ಶ್ರೀ ಮದಾಚಾರ್ಯರ ಇತರ ಸನ್ಯಾಸಿ ಶಿಷ್ಯರು

 
ಈ ಈರ್ವ ಶಿಷ್ಯಕುಲಮಣಿಗಳಲ್ಲದೆ

ಆನಂದ ತೀರ್ಥರ ದಿವ್ಯ ಸನ್ನಿಧಿಯಲ್ಲಿ

ನಾನಾಪ್ರದೇಶಗಳ ನೂರಾರು ಯತಿಗಳು
 

ಈರ್ವರ ಬಳಿಕವೂ, ಮತ್ತವರ ಮುನ್ನವೂ ಶಿಷ್ಯತ್ವ ವಹಿಸಿದರು
 
॥ ೧೨೭ ॥
 
ಅವರಲ್ಲಿ ಹಲವರು ಇಂದ್ರಿಯವ ಗೆಲಿದವರು
 

ಇನ್ನಷ್ಟು ಕೆಲವರು ಜನನ ಮರಣವ ಜಯಿಸಿದವರು

ನರಸಿಂಹನ ಪಾದದಾಶ್ರಿತರು ಕೆಲರು

ಹರಿನಾಮ ಹಾಡಿದ ಭಕ್ತರು ಕೆಲವರು
 
॥ ೧೨೮ ॥
 
ದೀರ್ಘವಲ್ಲದ ಹೆಸರನುಳ್ಳವರು ಕೆಲರು

ಶ್ರೀ ರಾಮ ಪಾದಗಳ ರಕ್ಷಿತರು ಕೆಲರು

ಉತ್ಕೃಷ್ಟರಪ್ರತ್ಯಕ್ಷ ಗುಣದಿಂದ ಕೆಲರು

ಎಲ್ಲರೂ ವೈರಾಗ್ಯ ಭಕ್ತಿ ಸಾಗರರು
 
270 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
124
 
125
 
126
 
127
 
128
 
129
 
॥ ೧೨೯ ॥