This page has been fully proofread once and needs a second look.

ವಿಷ್ಣುತೀರ್ಥರ ಧ್ಯಾನ ಅದ್ಭುತದ ಪರಿಯದು

ಕಾಮ ಮಣಿ ದೋಷವನ್ನು ಹೊಂದಿರದ ಧ್ಯಾನವದು

ಅಪರೋಕ್ಷಜ್ಞಾನದ ಬೆಳಕ ಪಡೆದಿಹ ಧ್ಯಾನ

ಕೈವಲ್ಯ ಸಾಮ್ರಾಜ್ಯ ಅದಕೆ ಮೌಲ್ಯ
 
॥ ೧೧೨ ॥
 
ಮಧ್ವನಾಥನು ಆಗ ಮಧ್ವರಾ ಅನುಜರಿಗೆ

ಕರುಣಿಸಿದ ಕೃಪೆಯು ಮನಕೆ ಗೋಚರಿಸದು

ಅತಿಯಾದ ಗೋಪ್ಯತೆಯ ಹೊಂದಿರುವ ಕರುಣೆಯನು

ವರ್ಣಿಸಲಸಾದ್ಧ್ಯವು ಈ ಕಥನದಲ್ಲಿ
 
॥ ೧೧೩ ॥
 
ಪೂರ್ಣಬೋಧರ ಸೇವೆ ಮಹಿಮೆಯಲ್ಲಿ ಕೂಡಿಹುದು

ಆದರಿಂದಲೇ ಅನುಜರಿಗೆ ಇಂತಹ ಸಿದ್ದಿ
 
ಧಿ
ಇಂತೆಂದು ಮಧ್ವಮುನಿ ಸೇವೆಯ ಮಹಿಮೆಯದು

ಮಾನ್ಯವಾಯಿತು ಜೀವ ದೇವಾದಿ ಗಣದಲ್ಲಿ
 
॥ ೧೧೪ ॥
 
ಕಠಿಣತಮ ವ್ರತಗಳಲ್ಲಿ ನಿಷ್ಠೆಯಿಂದಿದ್ದಿಹ

ಅತೀಂದ್ರಿಯ ಜ್ಞಾನದಲ್ಲಿ ನೈಪುಣ್ಯ ಪಡೆದಿದ್ದ

ವಿದ್ಯಾಸಮುದ್ರರೂ, ತರ್ಕಕೋವಿದರಾದ

ಅನಿರುದ್ಧ ತೀರ್ಥರು ಐತಂದರಲ್ಲಾಗ
 
॥ ೧೧೫ ॥
 
ಅವರ ಪ್ರಾರ್ಥನೆಯಿಂದ ಸಂಪ್ರೀತಗೊಂಡು

ರೂಪ್ಯಾಪೀಠಾಪುರಕೆ ವಿಷ್ಣುತೀರ್ಥರು ಅಂದು

ಮರಳಿದುದ ಕಂಡ ಶಿಷ್ಯಗಣವೆಲ್ಲವೂ

"ಮಧ್ವಮುನಿ ಇವರೇ" ಎಂಬ ಭ್ರಮೆಯನ್ನು ಹೊಂದಿದರು
 
॥ ೧೧೬ ॥
 
ಕವಿಕುಲಾಗ್ರಣಿಗಳೂ, ಪಂಡಿತಶ್ರೇಷ್ಠರೂ
 

ಮಧ್ವಮುನಿ ಕೇಲಿಗಳ ಗಿಳಿಯ ಪರಿಯಲ್ಲೂ ಇದ್ದ

ತಾಪಸಾಗ್ರಣಿಯಾದ ಬಾದರಾಯಣರೆಂಬ
 

ಮತ್ತೊಬ್ಬ ಶಿಷ್ಯರೂ ವಿಷ್ಣುತೀರ್ಥರಿಗಿದ್ದರು
 
268 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
112
 
113
 
114
 
115
 
116
 
117
 
॥ ೧೧೭ ॥