This page has been fully proofread once and needs a second look.

ಗುರುಕೃಪೆಯ ಅಂಕುರವ ತ್ವರಿತದಲ್ಲಿ ಗಳಿಸಿ

ಶ್ರೀ ವಿಷ್ಣುತೀರ್ಥರು ಇಂದ್ರಿಯಗಳ ನಿಗ್ರಹ,

ಹರಿಗುರುವ ಭಕ್ತಿ, ಮಾಧುರ್ಯ, ಪರಿಚರ್ಯ

ಮುಂತಾದ ಸಾಧನದಿ ಹೆಮ್ಮರವ ಮಾಡಿದರು
 
॥ ೧೦೦ ॥
 
ಆನಂದ ತೀರ್ಥರ ಕಾರುಣ್ಯ ವೆಂಬುವ

ಕಲ್ಪವೃಕ್ಷದ ಕೆಳಗೆ ಆಶ್ರಮವ ಪಡೆದ

ವಿಷ್ಣುತೀರ್ಥರ ಮಹಿಮೆ ಬಣ್ಣಿಸಲಸದಳವು

ಆದರೂ ಬಣ್ಣಿಪೆವು ಶಾಶಕ್ತ್ಯಾನುಸಾರ
 
॥ ೧೦೧ ॥
 
ಶ್ರೀ ವಿಷ್ಣುತೀರ್ಥರು ಪ್ರವಚನದಿ ಚತುರರು

ಪ್ರಣವಾದಿ ಮಂತ್ರದಲ್ಲಿ ಅತ್ಯಂತ ಕುಶಲರು

"ಮಧ್ವಮುನಿ ದಾಸರಲಿ ಪ್ರಪ್ರಥಮ ನಾನು'
"
ಅಂತಾಗಬೇಕೆಂದು ಅವರು ನಿಶ್ಚಿಚೈಸಿದರು
 
॥ ೧೦೨ ॥
 
ಬಡಗ ದಿಕ್ಕಿಗೆ ಅವರು ತೀರ್ಥಯಾತ್ರೆಗೆ ಹೊರಟು

ಹಲವಾರು ತೀರ್ಥದಲ್ಲಿ ಮಜ್ಜನವಗೈದರು

ತೀರ್ಥಗಳ ಜಲದಿಂದ ಪೂತರಾದರು ಅವರು

ಅವರ ಸಂಪರ್ಕದಲ್ಲಿ ತೀರ್ಥ ಪಾವನವಾಯ್ತು
 
॥ ೧೦೩ ॥
 
ಕಾಮ್ಯಕರ್ಮವ ತೊರೆದು ತಪವಗೈಯುವ ಜನಕೆ

ಸಾಧನೆಯ ಸ್ಥಳವೆಂದು ಖ್ಯಾತಗೊಂಡಂತಹ

ಹರಿಶ್ಚಂದ್ರವೆಂಬುವ ಪರ್ವತದ ಪ್ರಾಂತಕ್ಕೆ

ಐತಂದರವರು ಅದೃಶ್ಯರಾಗಿ
 
॥ ೧೦೪ ॥
 
ಮಾತ್ಸರ್ಯ ರಹಿತರು, ಶ್ರೀ ವಿಷ್ಣುತೀರ್ಥರು

ಶೀತ, ಉಷ್ಣಗಳೆಂಬ ದ್ವಂದ್ವದಲ್ಲಿ ಜನಿಸುವ

ದುಃಖವೆಂಬಗ್ನಿಯಲ್ಲಿ ದ್ವೇಷವನು ತಳೆಯುತ್ತ

ಅದಕೆ ಇಂಧನವಾದ ಅಶನವನು ತ್ಯಜಿಸಿದರು
 
266 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
100
 
101
 
102
 
103
 
104
 
105
 
॥ ೧೦೫ ॥