This page has been fully proofread once and needs a second look.

ಶ್ರೀರಾಮಚಂದ್ರನ ಕಥೆಯೆಂಬ ಸುಧೆಯನ್ನು

ಶ್ರವಣಮನನಾದಿಗಳಿಂದ ಸೇವಿಸುವ ಮಂದಿಗೆ

ಸ್ವರೂಪದಾನಂದದಾವಿರ್ಭಾವ ಮೋಕ್ಷಕ್ಕೆ

ದಾರಿಯನ್ನು ತೋರುವ ಸಾಧನವು ಅಹುದು

ಅದರಲ್ಲಿ ಮುಳುಗಿರುವ ಹನುಮಂತ ದೇವನು

ಇಂದಿಗೂ ನೆಲೆಸಿಹನು ಕಿಂ ಪುರುಷ ಖಂಡದಲ್ಲಿ
 
॥ ೨೭ ॥
 
ಶ್ರೀ ಭೀಮಾಮಾವತಾರ ಲೀಲಾ ವರ್ಣನ :
 

 
ಸಂತುಷ್ಟರಾದರು ಶ್ರೀ ವಾಯುದೇವರು

ಸ್ಪರ್ಶಮಾತ್ರದಿ ಅವರು ವರವನೊಂದಿತ್ತರು

ಪಾಂಡುರಾಜನ ಪತ್ನಿ ಕುಂತಿಯದ ಪಡೆದಳು

ಜನ್ಮವಿತ್ತಳು ಆಕೆ ದಿವ್ಯ ಶಿಶುವೊಂದಕ್ಕೆ

ಭೀಮಸೇನ ಎಂಬ ಹೆಸರಾಯ್ತು ಅದಕ್ಕೆ
 

ವಾಯುವಿನ ಎರಡನೆಯ ಅವತಾರವಾಯಿತು
 
॥ ೨೮ ॥
 
ಹಿಂದೊಂದು ಕಾಲದಲ್ಲಿ ಸುರಪತಿಯು ಒಮ್ಮೆ

ಆಯುಧವ ಬೀಸಿದ್ದ ಪರ್ವತದ ಕಡೆಗೆ

ಉದುರಿತ್ತು ಆಗ ರೆಕ್ಕೆಗಳು ಮಾತ್ರ

ಭೀಮಸೇನನ ಬಲವು ಇದಕ್ಕಿಂತ ಹೆಚ್ಚು

ಬೆದರಿದ್ದ ತಾಯಿಯ ಕೈಯಿಂದ ಜಾರಿದ

ಮಗುವಿನ ಸ್ಪರ್ಶಕ್ಕೆ ಪರ್ವತವು ಚೂರಾಯ್ತು
 
॥ ೨೯ ॥
 
ಆಟವಾಡಿದ ಭೀಮ ರಾಜಪುತ್ರರ ಕೂ
ಡೆ
ಅತ್ಯಲ್ಪ ಸಾಮರ್ಥ್ಯವನ್ನಾತ ತೋರಿದರೂ

ಸರಿಸಾಟಿ ಇರದಾಯ್ತು ಸೆಣಸಲವನೊಡನೆ

ಬದರಿಕಾಶ್ರಮದಲ್ಲಿ ತನ್ನ ಬಾಲ್ಯದಲ್ಲಿ

ಸಿಂಹಗಳ ಹಿಂಡನ್ನು ಹತಮಾಡಿದಾ ನೆನಪು

ಮರುಕಳಿಸಿ ಬಂದಿತ್ತು ಭೀಮಸೇನನಿಗೆ
 
10 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
27
 
28
 
29
 
30
 
॥ ೩೦ ॥