This page has been fully proofread once and needs a second look.

ಬಲು ಚತುರರು ನಮ್ಮ ಆನಂದ ತೀರ್ಥರು

ನಾಲ್ಕು ಜನ ಶಿಷ್ಯರನು ಒಂದೆಡೆಯೇ ಕುಳ್ಳಿರಿಸಿ

ನಾಲ್ಕು ಅಧ್ಯಾಯಗಳ ಅನುಭಾಷ್ಯವನ್ನು

ಒಮ್ಮೆಗೇ ಬರೆಸಿದರು ಸುಲಲಿತವಾಗಿ
 
॥ ೮೯ ॥
 
ನ್ಯಾಯ ವಿವರಣ ರಚನೆ
 

 
ತಮ್ಮ ಈ ಗ್ರಂಥದಲಿ ಉಪಪನ್ನವಾದ

ಯುಕ್ತಿ ಮಾಲಾ ಎಂಬ ಭಾಗಕ್ಕೆ ಮಧ್ವರು

ಸಿದ್ಧಾಂತ ಯುಕ್ತಿಗಳ ವಿವರಣೆಯ ಸಲುವಾಗಿ

ನ್ಯಾಯವಿವರಣ ವೆಂಬ ಗ್ರಂಥವನ್ನು ರಚಿಸಿದರು
 
॥ ೯೦ ॥
 
ಶ್ರೀ ವಿಷ್ಣುತೀರ್ಥರ ಮಹಿಮಾ ವರ್ಣನೆ
 

 
ಮಧ್ವಂವೇಂದುವಿನ ನಿತ್ಯ ಸಂಬಂಧದಿಂದ

ಅಜ್ಞಾನ, ತಾಪಗಳ ಬಂಧನವ ತೊರೆಯುತ್ತ

ವೈಕುಂಠ ಯಾತ್ರೆಯನ್ನು ತಾಯ್ತಂದೆ ಮಾಡಿದರು

ಮಧ್ವರನುಜರು ಆಗ ಪಾಜಕದಿ ಉಳಿದರು
 
॥ ೯೧ ॥
 
ವಿಧಿಯ ಭೂಭ್ರೂಲಾಸ್ಯದಲಿ ಆ ಮಧ್ವರನುಜರು

ಧನ, ಧಾನ್ಯ ಗೋವುಗಳು ನಾಶವಾದುದ ಕಂಡು

ವೈರಾಗ್ಯ ಭಾವವನು ಕೂಡಲೇ ತಳೆದು

ವೇದವ್ಯಾಖ್ಯೆಯ ನಿಪುಣ ಅಗ್ರಜನ ಕಂಡರು
 
॥ ೯೨ ॥
 
ಅಡಿಗಡಿಗೆ ಅಗ್ರಜರ ಅಡಿಗಳಿಗೆ ಎರಗುತ್ತ

ಸನ್ಯಾಸವನ್ನೆಮಗೆ ನೀಡಿರೆಂದನ್ನುತ್ತ

ಬಿನ್ನಹವ ಮಾಡಿದ ಅನುಜನಿಗೆ ಮಧ್ವರು

ಕಾಲಸನ್ನಿಹಿತವಾಗಿಲ್ಲವೆಂದೆನ್ನುತ್ತ ಕಳುಹಿದರು ಆತನನು ಪಾಜಕಕ್ಕೆ
 
264 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
89
 
90
 
91
 
92
 
93
 
॥ ೯೩ ॥