This page has been fully proofread once and needs a second look.

"ಯಮಕ ಭಾರತವೊಂದು ವಿಶ್ವವಿಸ್ಮಯ ರಚನೆ !

ಭಾರತದ ಗೌಪ್ಯದ ಅರ್ಥ ಸಂಗ್ರಹ ರೂಪ !

ಕಾವ್ಯ ಸಾಮರ್ಥ್ಯವನು ಜಗಕೆ ತೋರಿಸಲೆಂದು

ಓ ಮಧ್ವಮುನಿಗಳೇ ! ರಚಿಸಿಹಿರಿ ಈ ಕಾವ್ಯ"
 
॥ ೮೩ ॥
 
"ರತ್ನದಾಕರವಾದ ಜ್ಞಾನಸಾಗರ ನೀವು !

ಸಾಗರದ ಗರ್ಭದಲ್ಲಿ ಅಡಗಿರುವ ರತ್ನಗಳ

ವಿಧ ವಿಧದ ಸ್ತೋತ್ರಗಳ, ಜಾಣ್ಣುನುಡಿಯ, ಗಾಥೆಗಳ

ಅಮೂಲ್ಯ ತುಣುಕುಗಳನೆಣಿಸುವರು ಯಾರು? ?
 
" ॥ ೮೪ ॥
 
"ಶಬ್ದದಲಿ ಪರಿಮಿತವು ಅರ್ಥದಲ್ಲಿ ಅಪರಿಮಿತ

ಈ ತಮ್ಮ ಸಾಹಿತ್ಯ ದಿವ್ಯ ಚಿಂತಾಮಣಿಯು

ಇಂತೆಂದು ಭಾವಿಸಿಹ ಸುಜನರ ಈ ಸಭೆಯು

ಲ್ಪಮತಿಗಳ ಕಂಡು ಪರಿಹಾಸ ಮಾಡುತಿದೆ''
 
॥ ೮೫ ॥
 
ಅನುವ್ಯಾಖ್ಯಾನ ಗ್ರಂಥ ರಚನೆ
 
'

 
"
ಪುರುಹೂತನಂತಹ ದೇವತೆಗಳಿದ್ದರೂ

ತಾರಕನ ವೈರಿಯನೇ ಅಮರರಿಚ್ಛಿಸಿದಂತೆ

ಇಷ್ಟೊಂದು ಗ್ರಂಥಗಳ ತಾವು ರಚಿಸಿದ್ದರೂ

ಮತ್ತೊಂದು ಗ್ರಂಥವನು ತಮ್ಮಿಂದ ಬಯಸುವೆವು''
 
॥ ೮೬ ॥
 
"
ಗಂಭೀರವಾಗಿರುವ ಈ ಗ್ರಂಥ ಯುಕ್ತಿಗಳು

ಮನದ ಮಾಂದ್ಯತೆಯಿಂದ ನಮಗೆ ಅವು ಅಗ್ರಾಹ್ಯ

ಅಂತಹ ಯುಕ್ತಿಗಳ ಸರಳಗೊಳಿಸುವ ಹಾಗೆ

ಮತ್ತೊಂದು ಗ್ರಂಥವನು ದಯಮಾಡಿ ರಚಿಸಿರಿ''
 
॥ ೮೭ ॥
 
ಮಧ್ವಮುನಿಗಳು ಇಂತು ಪ್ರಾರ್ಥನೆಗೆ ಓಗೊಟ್ಟು

ಸಜ್ಜನಕೆ ಸುಧೆಯಂತೆ, ದುರ್ವಾದಿ ಗರ್ವಕ್ಕೆ ವಜ್ರಸದೃಶದಂತೆ
 

ಮಾಯಿಗಳ ಕತ್ತಲೆಗೆ ರವಿಯ ಬೆಳಕಂತೆ
 

ಅನು ಭಾಷ್ಯವೆಂಬುವ ಗ್ರಂಥವನು ರಚಿಸಿದರು
 
ಹದಿನೈದನೆಯ ಸರ್ಗ / 263
 
83
 
84
 
85
 
86
 
87
 
88
 
॥ ೮೮ ॥