This page has been fully proofread once and needs a second look.

ಬ್ರಹ್ಮಸೂತ್ರದ ಭಾಷ್ಯ ವ್ಯಾಖ್ಯಾನವನ್ನು

ನಂತರದಿ ಮಧ್ವಮುನಿ ಆರಂಭಿಸಿದರು

ಸೂರಿನಂದನರದನು ಶ್ರವಣ ಮಾಡಿದರು

ಸಂತರ ಪ್ರೀತಿಯನು, ದುಷ್ಟರಪ್ರೀತಿಯನ್ನು ಒಮ್ಮೆಗೇ ಪಡೆದರು
 
॥ ೭೧ ॥
 
ತ್ರಿವಿಕ್ರಮ ಪಂಡಿತಕೃತ ಮಧ್ಯಗ್ರಂಥ ವರ್ಣನ
 

 
ವಿಕ್ರಮಾರ್ಯರು ಆಗ ಗುರ್ವಾಜ್ಞೆ ಗೌರವಿಸಿ

ದುಷ್ಕರದ ಭಾಷ್ಯಕ್ಕೆ ಟೀಕೆಯನು ರಚಿಸಲು

ಉದ್ಯುಕ್ತರಾಗುತ್ತ ಪರಮಗುರು ಮಧ್ವರನು

ಕುರಿತು ಇಂತೆಂದು ಪ್ರಾರ್ಥಿಸಲು ತೊಡಗಿದರು
 
॥ ೭೨ ॥
 
"ಕವಿವರ್ಯರೆಲ್ಲರೂ ಹಗಲಿರಳು ಶ್ರಮಿಸುತ್ತ

ನಿಮ್ಮ ಭಾಷ್ಯಾಬ್ಲಿಧಿಯ ನ್ಯಾಯರತ್ನಗಳನ್ನು

ಹೆಕ್ಕುತ್ತ ತೆಗೆದರೂ ಸಂಗ್ರಹವು ಮುಗಿದಿಲ್ಲ

ಅದ್ಭುತವು ! ಅದ್ಭುತವು ! ಇದರ ಗಾಂಭೀರ್ಯ !
 
" ॥ ೭೩ ॥
 
"ಉಪನಿಷದ್ಭಾಷ್ಯಗಳ ಮಂದಿರಗಳಲ್ಲಿ
 

ಯುಕ್ತವಹ ಅರ್ಥಗಳ ಹತ್ತು ಉಪನಿಷತ್ತುಗಳ

ದೇವತೆಗಳೆಲ್ಲರೂ ದೇವಿಯರೆಲ್ಲರನು

ಸುಪ್ರೀತಗೊಳಿಸುವ ತರದಲ್ಲಿ ಇಹವು
 
॥ ೭೪ ॥
 
"ಗೀತೆಯ ಭಾಷ್ಯಗಳು, ಅದರ ತಾತ್ಪರ್ಯಗಳು

ಪ್ರತಿವಾದ ಹೂಡಲು ಸಾಧ್ಯವಿರದಂತಹ

ವಚನವೃಂದಗಳಿಂದ ವಿಜೃಂಭಿಸಿಹವು

ಅರ್ಕೆಂಕೇಂದು ಕಿರಣದಲಿ ಜಗವು ಬೆಳಗಿದ ಹಾಗೆ
 
" ॥ ೭೫ ॥
 
"ನಿಮ್ಮ ಚಿತ್ತಾದ್ರಿಯು ಮಥಿಸಿ ಹೊರತೆಗೆದಿರುವ

ಇತಿಹಾಸ ಪುರಾಣದ ಕ್ಷೀರಸಾಗರದಿಂದ

ಹೊರಬಂದ ಭಾರತದ ತಾತ್ಪರ್ಯ ಸುಧೆಯನ್ನು
 

ಯಾವ ಸುಜನನು ತಾನೆ ಸವಿಯದಿಹನು'" ?
 
ಹದಿನೈದನೆಯ ಸರ್ಗ / 261
 
71
 
72
 
73
 
74
 
75
 
76
 
॥ ೭೬ ॥