2023-02-26 12:36:22 by ambuda-bot
This page has not been fully proofread.
ನಂತರದಿ ಆ ಪಂಡಿತೋತ್ತಮರು ತ್ವರೆಯಿಂದ
ಜ್ಞಾನವೆಂಬುವ ಚಾಪ ಮೌರ್ವಿಯ ನೆರವಿಂದ
ವಿವಿಧ ತರ್ಕಗಳೆಂಬ ಬಾಣಗಳ ಹೂಡಿ
ಬುದ್ದಿ ಬಲದಿಂದವನು ಸರಸರನೆ ಬಿಟ್ಟರು
ನಗುನಗುತ ಆ ನಮ್ಮ ಆನಂದ ತೀರ್ಥರು
ತ್ರಿವಿಕ್ರಮರ ಯುಕ್ತಿಗಳ ಬಾಣಗಳನೆಲ್ಲ
ಪ್ರತಿ ತರ್ಕವೆಂಬುವ ಬಾಣಗಳ ಹೂಡಿ
ಸುಲಭದಲ್ಲಿ ಅವುಗಳನ್ನು ಖಂಡಿಸಿದರು
ಆನಂದ ತೀರ್ಥರನು ಗೆಲ್ಲಬಯಸಿದ ಅವರು
ಇತರ ಮಂದಿಗಳಿಂದ ಧರಿಸಲಾಗದ ತೆರದ
ಮತ್ತಿತರ ಪುರುಷರು ತಡೆಯಲಾಗದ ತೆರದ
ವೇದವಾಕ್ಯಗಳೆಂಬ ಅಸ್ತ್ರಗಳ ಬೀರಿದರು
ನಿರವಕಾಶವಹ, ಬಹುವಾದ ಸಂಖ್ಯೆ ಇಹ
ವೇದಗತ ವಾಕ್ಯಗಳ ಅತಿಶಯದ ನೆರವಿಂದ
ಆನಂದತೀರ್ಥರು ವಿಧವಿಧದ ಅರ್ಥಗಳ
ಪ್ರತ್ಯಸ್ತ್ರಗಳ ತೆರದಿ ಖಂಡಿಸಿದರವುಗಳನು
ವಾಕ್ಯಾರ್ಥ ಜರುಗಿದವು ಎರಡು ಸಪ್ತಾಹದಲ್ಲಿ
ಎರಡು ದಿಗ್ಗಜಗಳ ಅಪ್ರತಿಮ ಕಾಳಗ !
ಚಕ್ರಪಾಣಿಯ ಪ್ರಿಯರು ಆನಂದ ತೀರ್ಥರು
ಕತ್ತರಿಸಿ ಹಾಕಿದರು ಎಲ್ಲ ಸಂಶಯವ
ತ್ರಿವಿಕ್ರಮರು ಮಧ್ವಶಿಷ್ಯರಾದದ್ದು
ಸಾತ್ವಿಕತೆಯೇ ಮೈವೆತ್ತ ಆ ತ್ರಿವಿಕ್ರಮರು
ಆನಂದ ತೀರ್ಥರನು ಕುರಿತು ಇಂತೆಂದರು:
"ಮನ್ನಿಸಿರಿ, ಓ ಸ್ವಾಮಿ! ಈ ನನ್ನ ಚಾಪಲ್ಯ!
ಪದಪದ್ಮಧೂಳಿಯ ಸೇವೆಯನ್ನು ಕರುಣಿಸಿರಿ"
260 / ಶ್ರೀ ಸುಮಧ್ವವಿಜಯ ಕನ್ನಡ ಕಾವ್ಯ
65
66
67
68
69
70
ಜ್ಞಾನವೆಂಬುವ ಚಾಪ ಮೌರ್ವಿಯ ನೆರವಿಂದ
ವಿವಿಧ ತರ್ಕಗಳೆಂಬ ಬಾಣಗಳ ಹೂಡಿ
ಬುದ್ದಿ ಬಲದಿಂದವನು ಸರಸರನೆ ಬಿಟ್ಟರು
ನಗುನಗುತ ಆ ನಮ್ಮ ಆನಂದ ತೀರ್ಥರು
ತ್ರಿವಿಕ್ರಮರ ಯುಕ್ತಿಗಳ ಬಾಣಗಳನೆಲ್ಲ
ಪ್ರತಿ ತರ್ಕವೆಂಬುವ ಬಾಣಗಳ ಹೂಡಿ
ಸುಲಭದಲ್ಲಿ ಅವುಗಳನ್ನು ಖಂಡಿಸಿದರು
ಆನಂದ ತೀರ್ಥರನು ಗೆಲ್ಲಬಯಸಿದ ಅವರು
ಇತರ ಮಂದಿಗಳಿಂದ ಧರಿಸಲಾಗದ ತೆರದ
ಮತ್ತಿತರ ಪುರುಷರು ತಡೆಯಲಾಗದ ತೆರದ
ವೇದವಾಕ್ಯಗಳೆಂಬ ಅಸ್ತ್ರಗಳ ಬೀರಿದರು
ನಿರವಕಾಶವಹ, ಬಹುವಾದ ಸಂಖ್ಯೆ ಇಹ
ವೇದಗತ ವಾಕ್ಯಗಳ ಅತಿಶಯದ ನೆರವಿಂದ
ಆನಂದತೀರ್ಥರು ವಿಧವಿಧದ ಅರ್ಥಗಳ
ಪ್ರತ್ಯಸ್ತ್ರಗಳ ತೆರದಿ ಖಂಡಿಸಿದರವುಗಳನು
ವಾಕ್ಯಾರ್ಥ ಜರುಗಿದವು ಎರಡು ಸಪ್ತಾಹದಲ್ಲಿ
ಎರಡು ದಿಗ್ಗಜಗಳ ಅಪ್ರತಿಮ ಕಾಳಗ !
ಚಕ್ರಪಾಣಿಯ ಪ್ರಿಯರು ಆನಂದ ತೀರ್ಥರು
ಕತ್ತರಿಸಿ ಹಾಕಿದರು ಎಲ್ಲ ಸಂಶಯವ
ತ್ರಿವಿಕ್ರಮರು ಮಧ್ವಶಿಷ್ಯರಾದದ್ದು
ಸಾತ್ವಿಕತೆಯೇ ಮೈವೆತ್ತ ಆ ತ್ರಿವಿಕ್ರಮರು
ಆನಂದ ತೀರ್ಥರನು ಕುರಿತು ಇಂತೆಂದರು:
"ಮನ್ನಿಸಿರಿ, ಓ ಸ್ವಾಮಿ! ಈ ನನ್ನ ಚಾಪಲ್ಯ!
ಪದಪದ್ಮಧೂಳಿಯ ಸೇವೆಯನ್ನು ಕರುಣಿಸಿರಿ"
260 / ಶ್ರೀ ಸುಮಧ್ವವಿಜಯ ಕನ್ನಡ ಕಾವ್ಯ
65
66
67
68
69
70