This page has been fully proofread once and needs a second look.

ರೂಪಾದಿ ಜ್ಞಾನವನ್ನು ಮುಕ್ತ ಹೊಂದಿರುವನು

ಈಶ್ವರನ ತೆರದಲ್ಲಿ ಸತ್ ಅವನು, ಜಡವಲ್ಲ

ಈಶ್ವರನು ಸರ್ವಜ್ಞನೆಂದು ನೀ ಒಪ್ಪಿದರೆ

ಸಾಧ್ಯ ವೈಕಲ್ಯದ ದೋಷ ಉಂಟಾಗದು
 
॥ ೫೯ ॥
 
ರೂಪಾದಿ ಅನುಭವವು ಈಶ್ವರಗೆ ಉಂಟು

ಆದರೂ ಈಶ್ವರನು "ಸುಖ'" ವ ಪಡೆದವನಲ್ಲ

ಸುಖಿಯಾದ ಚೇತನಕೆ ದು:ದುಃಖವೂ ಉಂಟೆನಬೇಡ

ಇಂತಹ ವ್ಯಾಪ್ತಿಯನ್ನು ನಾವು ಒಪ್ಪುವುದಿಲ್ಲ
 
॥ ೬೦ ॥
 
ಈಶ್ವರನ ದೃಷ್ಟಾಂತ ಒಪ್ಪದೇ ಇದ್ದಲ್ಲಿ

ಪಾಷಣದಂತೆಂಬ ದೃಷ್ಟಾಂತ ನೀಡುವೆವು

ಶುದ್ಧ ಚಿದ್ದೇಹೇಂದ್ರಿಯ ಭೋಗವನು

ಮುಕ್ತನನುಭವಿಸುವನು ಪರಲೋಕದಲ್ಲಿ
 
॥ ೬೧ ॥
 
ಸ್ವಾನಂದ ಅನುಭವದ ಮೋಕ್ಷದ ವಿಷಯವು

ವೇದೋಕ್ತವಾಗಿಹುದು ಮುಕ್ತಿಸಾಧಿತವಹುದು

ಈ ಬಗ್ಗೆ ದ್ವೇಷಕ್ಕೆ ಕಾರಣವು ಏನು ?

ನಿರ್ವಿಶೇಷ ಬ್ರಹ್ಮನಲಿ ಆಗ್ರಹವು ಏಕೆ ?
 
॥ ೬೨ ॥
 
"ವೇದಗಳು ಆಗಿಹವು ಸ್ವಪ್ರಮಾಣಿತವು

ಕ್ರೀಡಾದಿಗುಣಶಿಷ್ಠ ವೇದ ಪ್ರತಿಪಾದ್ಯನು

ಶ್ರೀ ಹರಿಯು ನೀಡುವನು ಮೋಕ್ಷಾದಿಗಳನು"

ಇಂತೆಂದು ಒಪ್ಪಿದರೆ ಲಭಿಸುವುದು ಮಂಗಲವು
 
॥ ೬೩ ॥
 
ತ್ರಿವಿಕ್ರಮ ಪಂಡಿತರ ವಾದಕಥಾ
 

 
ಇತ್ಯಾದಿ ಶಾಸ್ತ್ರಗಳ ಅರ್ಥಗಳ ವಿವರಿಸುವ

ಆನಂದ ತೀರ್ಥರ ವ್ಯಾಖ್ಯೋಪನ್ಯಾಸಗಳ

ಪಂಡಿತೋತ್ತಮರಾದ ಆ ತ್ರಿವಿಕ್ರಮರು

ಏಕಾಗ್ರ ಚಿತ್ರದಲ್ತದಲಿ ಶ್ರವಣ ಮಾಡಿದರು.
 
ಹದಿನೈದನೆಯ ಸರ್ಗ / 259
 
59
 
60
 
61
 
62
 
63
 
64
 
॥ ೬೪ ॥