This page has been fully proofread once and needs a second look.

ದೇಹವಿದ್ದರೂ ಈಶನಿಗೆ ಊರ್ಮಿಗಳು ಇಲ್ಲ

ದೇಹತ್ವ ಹೇತುವಿಗೆ ಅನೈಕಾಂತಿಕತೆ ಬಹುದು

ಈಶ್ವರಗೆ ದೇಹವಿರದಿರೆ, ಇಚ್ಛಾದಿಗಳೂ ಇರದು

ಆಗವನು ಶಶವಿಷಾಣದ ತೆರದಿ ಅಸತ್ ಆಗುವನು
 
॥ ೫೩ ॥
 
ಜ್ಞಾತ್ರಾದಿ ರೂಪಗಳ ವೈಲಕ್ಷಣ್ಯವನ್ನು ನೀಡಿದರೆ

ಈಶ್ವರಗೂ ದೇಹವನು ಒಪ್ಪಿದಂತಾಯ್ತು

ಇದರಿಂದ ನಮ್ಮ ಮತ ಒಪ್ಪಿದಂತಾಯ್ತು

ಪ್ರಾಕೃತಾಕೃತಿ ಅವಗೆ ನಾವು ಹೇಳುವುದಿಲ್ಲ
 
॥ ೫೪ ॥
 
ಅಂತಾದರೆ ನಾವು ಈಶ್ವರನ ತೆರದಿ

ಸ್ವರೂಪ ಭೂತದ ದೇಹ ಮುಕ್ತನಿಗೂ ಇದೆ

ಎಂಬಂಥ ಮಾತನ್ನು ಸ್ವೀಕರಿಸಬೇಕು

ಮುಕ್ತನಿಗೆ ಪ್ರಾಕೃತದ ದೇಹದdನಿಷ್ಟವಿರದು
 
॥ ೫೫ ॥
 
ಮುಕ್ತನಿಗೆ ಇಹುದೆ ಅವಯವಗಳು ?

ವಿನಾಶತ್ವ ಪ್ರಸಂಗದಿಂದ ಅವಗಿಲ್ಲ ಅವಯವ
 

ಪಟದಂತೆ ಎಂಬುವ ಅನುಮಾನ ಹೊಂದಿದರೆ
 

ಎಂತಹ ಅವಯವವ ನೀವು ಒಪ್ಪುವುದಿಲ್ಲ?
 
॥ ೫೬ ॥
 
ಸ್ವರೂಪದೊಳು ಭಿನ್ನವಹ ಅವಯವಗಳನ್ನು

ಮುಕ್ತನಿಗೆ ಇಲ್ಲವೆಂದನ್ನು ವಿರೆ ನೀವು ?

ಅದರಿಂದ ಸಿದ್ದಿಧಿ ಸಾಧನ ದೋಷ ಬಹುದು.

ಮುಕ್ತಸ್ವರೂಪರಿಗೆ ತಕ್ಕ ಅವಯವವನ್ನು ನಾವು ಒಪ್ಪೋಣ
 
॥ ೫೭ ॥
 
ಪ್ರತಿವಾದಿ ಪಕ್ಷದಲ್ಲಿ ಪರಮಾತ್ಮ ವ್ಯಾಪ್ತಿಯನು

ಪರಮಾಗ್ಣ್ವಾದಿ ಕ್ಷೇತ್ರದಲಿ, ವ್ಯಾಮಾದಿಗಳಲಿ

ಅಭಿನ್ನ ಅವಯವವ ಸ್ವೀಕರಿಸಲಾಗಿದೆ

ಅಂತೆಯೇ ಮುಕ್ತರಿಗೆ ಅವಯವಗಳಿಹವು
 
258 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
53
 
54
 
55
 
56
 
57
 
58
 
॥ ೫೮ ॥