This page has been fully proofread once and needs a second look.

ಬ್ರಹ್ಮಾದಿ ತತ್ವಗಳು ಭಾವ ವಸ್ತುಗಳಲ್ಲ

ಭೇದರಹಿತವು ಅವು ಶೂನ್ಯಾತ್ಮಕ ವಹುದು

ಧ್ಯಾನ ವಿಷಯಕವು ಅಲ್ಲ, ಶ್ರವಣ ಮನನವು ಸಲ್ಲ

ಅಭೀಷ್ಟ ಫಲಗಳನ್ನು ಕೊಡುವಂಥವಲ್ಲ
 
॥ ೪೧ ॥
 
ಗಗನ ಕುಸುಮದ ತೆರದಿ ಈ ಬ್ರಹ್ಮಾದಿ ತತ್ವಗಳು

ವಿಚಾರ್ಯವಾಗದದು; ಧೈಧ್ಯೇಯವೂ ಆಗದು

ಪ್ರಮಾಣಾದಿಗಳಂತೆ ಈ ತತ್ವಗಳನು

ವ್ಯತಿರೇಕ ದೃಷ್ಟಾಂತ ಊಹಿಸುತಲಿರಬೇಕು
 
॥ ೪೨ ॥
 
ವೇದಗಳು ಅಪ್ರಮಾಣವೆಂದು ತಿಳಿದಲ್ಲಿ

ಧರ್ಮಾದಿ ಭಾವಗಳು ಅಪ್ರಾಮಾಣ್ಯವಾಗುವುವು

ಪ್ರತ್ಯಕ್ಷವೇ ಪ್ರಮಾಣ ಎಂದು ನಂಬುವ ಮಂದಿ

ಧರ್ಮದಭಾವವನ್ನು ಸಾಧಿಸಲು ಸಾಧ್ಯವೆ ?
 
॥ ೪೩ ॥
 
ಧರ್ಮಾದಿ ವಸ್ತುಗಳು ಅತೀಂದ್ರಿಯವು ಅಹುದು

ಪುರುಷಕೃತ ವಾಕ್ಯಗಳು ಪ್ರಮಾಣ ವಲ್ಲವವ
ಕೆ
ಉನ್ಮತ್ತನೊಬ್ಬನು ಮಾತನಾಡುವ ತೆರದಿ

ಇಂತಹ ವಾಕ್ಯಗಳು ಅಪ್ರಮಾಣವಾಗುವುವು
 
॥ ೪೪ ॥
 
ವಿಮತನೊಬ್ಬನು ಅಜ್ಞ, ವಂಚಕನು ಇರಬಹುದು

"ಪುರುಷನಾಗಿಹ ಆತ ಚೈತ್ರನಂತೆ"

ಓರ್ವನನು ಸರ್ವಜ್ಞನೆಂದು ಸಾಧಿಸುವಲ್ಲಿ

ಇಂತಹ ಯುಕ್ತಿಗಳು ಸರ್ವಥಾ ಸಲ್ಲ
 
॥ ೪೫ ॥
 
ಆಗ್ರಹವನಿರಿಸಿದರೆ ದುಃಶಾಸ್ತ್ರಗಳಲ್ಲಿ

ಪರದೈವ ಜ್ಞಾನವು ತಪ್ಪಾಗಿ ತಿಳಿಯುವುದು

ದುಃಖಕ್ಕೆ ಆಕರವು ಅತಿ ಘೋರ ಲೋಕವು

ಇದರಿಂದ ದೊರೆಯುವುದು ಅಜ್ಞಾನಿಗಳಿಗೆ
 
256 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
41
 
42
 
43
 
44
 
45
 
46
 
॥ ೪೬ ॥