This page has been fully proofread once and needs a second look.

ಹನುಮಂತ ಸಲ್ಲಿಸಿದ ಸೇವೆಯನ್ನು ಕಂಡು

ಸುಪ್ರೀತರಾದರು ಶ್ರೀ ರಾಮದೇವರು

ತಮ್ಮ ಹಸ್ತವನವನ ಶಿರದ ಮೇಲಿರಿಸುತ್ತ

ಅನುಕಂಪ ದೃಷ್ಟಿಯನ್ನು ಅವನೆಡೆಗೆ ಬೀರುತ್ತ
 

ಹಾಲಸವಿಯಂದದ ನುಡಿಗಳನ್ನು ನುಡಿದು
 

ಬ್ರಹ್ಮಪದವಿಯನಿತ್ತು ಹರಸಿದರು ಅವನ
 
॥ ೨೩ ॥
 
ಹನುಮಂತನಾ ತೆರದಿ ಬೇರೊಬ್ಬರಿಲ್ಲ

ರಾಮಚಂದ್ರನಿಗಷ್ಟು ಪ್ರಿಯರು ಮತ್ತಾರಿಲ್ಲ

ರಾಮರಾಜ್ಯದಿ ಸಿಗದ ವಸ್ತುವೇ ಇಲ್ಲ

ಆದರೂ ಹನುಮಗೆ ರಾಮಸೇವೆಯ ಎಲ್ಲ
ಯೆ ಬೆಲ್ಲ
ಮತ್ತಾವ ಭೋಗವೂ ಅವಗೆ ಬೇಕಿಲ್ಲ

ನಿಜವಾದ ವೈರಾಗ್ಯ ಇದುವೆ ಅಲ್ಲ?
 
॥ ೨೪ ॥
 
ಹನುಮಂತ ಸ್ತುತಿಸಿದನು ಶ್ರೀರಾಮನನ್ನು

"ನಮಿಪೆ ಶ್ರೀರಾಮ ! ನಮಿಪೆ ಓ ನಾಥ!

ನಮನ, ನಮನವು ನಿನಗೆ ಜಾನಕಿ ಕಾಕೀ ಕಾಂತ!

ಎರಗುವೆನು ನಿನ್ನಯಾ ಚರಣಾರವಿಂದಕ್ಕೆ

ವಂದಿಸುವೆ ನಿನಗೆ ಬಾರಿಬಾರಿಗೂ ನಾನು

ಹೀಗೆಂದು ಹನುಮಂತ ಸ್ತುತಿಸಿದನು ಸಂತಸದಿ
 
॥ ೨೫ ॥
 
ಭೂಲೋಕವನ್ನು ಬಿಟ್ಟು ವೈಕುಂತದೆಡೆಗೆ

ಮರಳಿದಾ ಭಗವಂತ ಶ್ರೀ ರಾಮಚಂದ್ರ

ಅನುಗಾಲ ಪೂಜಿಸಲು ಅನುಕೂಲವಾಗಲು
 

ತನ್ನೊಂದು ರೂಪವನೇ ಹನುಮನ ಬಳಿ ಇಟ್ಟ

ವಾನರಾಗ್ರೇಸರ ಹನುಮಂತನಲ್ಲಿ

ಶ್ರೀರಾಮನಭಿಮಾನ ಎಷ್ಟೊಂಟೆಂದು ಬಣ್ಣಿಪುದು ?
 
ಮೊದಲನೆಯ ಸರ್ಗ /9
 
ܐܐ
 
24
 
25
 
26
 
॥ ೨೬ ॥