This page has been fully proofread once and needs a second look.

"ಸತ್ಯಂ, ಜ್ಞಾನಂ, ಅನಂತಂ, ಬ್ರಹ್ಮ"

ಎಂಬಂಥ ವಾಕ್ಯಗಳು ವೇದ ಪ್ರತಿಪಾದಿತವು
 

ನಿರ್ಗುಣ ಬ್ರಹ್ಮನನು ವಿವರಿಸುವ ವಾಕ್ಯಗಳು

ಬ್ರಹ್ಮನಿಗೆ ವಿಶೇಷಣಗಳಿಲ್ಲವೆಂಬುವುವು
 
॥ ೩೫ ॥
 
"ಜಡತ್ವಾದಿ ಗುಣಗಳೂ ಬ್ರಹ್ಮನಲ್ಲಿಲ್ಲ"

ಇಂತಹ ಮಾತುಗಳೂ ಶೋಭಿಸುವುದಿಲ್ಲ

ಭಾವರೂಪದ ಬ್ರಹ್ಮಗೆ ಅಭಾವ ಅಸಂಭವವು

ನಿರ್ವಿಶೇಷನು ಅವನು; ಭಾವಾಭಾವಗಳೆಲ್ಲ ಅವನಿಗಿಲ್ಲ
 
॥ ೩೬ ॥
 
ವೇದ ಪ್ರತಿಪಾದಿತ ಪ್ರಮೇಯಗಳನೆಲ್ಲ

ಸರ್ವದಾ ಸಟೆಯೆಂದು ಸಾಧಿಸುವ ಶಪಥವನು

ಈ ಮಾಯಾವಾದಿಗಳು ಎಂದೆಂದೂ ತೊಟ್ಟಿಹರು

ಜ್ಞಾನಗಳು ಇವರನ್ನು ವೇದ ಬಾಹ್ಯರೆನಬೇಕು
 
॥ ೩೭ ॥
 
ಮಾಯಾವಾದವು ಮತ್ತು ಶೂನ್ಯವಾದಗಳೆರಡೂ

ಸಜ್ಜನರು ಒಪ್ಪದಿಹ ಎರಡು ಮತಗಳು ಅಹುದು

ಶೂನ್ಯಮತವನು ಅವರು ಆಗಲೇ ತಳ್ಳಿಹರು

ಮಾಯಾವಾದಿಗಳನ್ನೂ ನಾವು ಜರೆಯಬೇಕೀಗ
 
॥ ೩೮ ॥
 
ಬ್ರಹ್ಮ ಶೂನ್ಯಗಳೆರಡೂ ಅವಿಶೇಷವಾಗಿಹವು

ಇದರಿಂದ "ಅಸತ್ಪಾವಾತ್" ಎಂಬೊಂದು ಹೇಳುವು
ತುವು
ಬ್ರಹ್ಮ ಕಾರಣತ್ವವನ್ನು ಸಾಧಿಸುವ ಮಿಥ್ಯರಿಗೆ

"ಅಸಿದ್ಧ" ವಾಗುವುದು ಎಂಬುವಂತಿಲ್ಲ
 
॥ ೩೯ ॥
 
ಮಾಯಾವಾದಿಗಳೆಲ್ಲ ತಮ್ಮ ತತ್ವವನ್ನು ಅನುಸರಿಸಿ

ಬ್ರಹ್ಮನಿಗೆ ಸತ್ವವೊಂದುಂಟೆಂದು ಒಪ್ಪಿದರೆ

ಆಗವನು ವಿಶೇಷವನು ಹೊಂದುವುದು ಸಹಜ
 

ಆಗವರು ಬ್ರಹ್ಮನಿಗೆ ಅಸತ್ವವನ್ನು ಒಪ್ಪುವರೆ ?
 
ಹದಿನೈದನೆಯ ಸರ್ಗ / 255
 
35
 
36
 
37
 
38
 
39
 
40
 
॥ ೪೦ ॥