This page has been fully proofread once and needs a second look.

ಓ, ತಾಪಸನೆ ! ನೀನೀಗ ನನ್ನ ಮಾತನು ಕೇಳು

ಕುಂಬಾರನಂತೇ ಜಗಕೆ ಶೂನ್ಯ ಕಾರಣವಲ್ಲ

ಶೂನ್ಯದ ಅರಿವಿರದ ಯಾವ ಜಗ ಕಾಣುವುದೋ

ಅಂತಹ ಶೂನ್ಯವೇ ಈ ಜಗಕೆ ಕಾರಣವೆ ?
 
॥ ೨೯ ॥
 
ಓ ದೀರ್ಘಾಯು ಮಾನವನೆ ! ಈ ಮಾತ ಕೇಳು
 

ಅಂತಹ ಶೂನ್ಯವದು ಜಗಕೆ ಕಾರಣವಲ್ಲ

"ಅಧಿಷ್ಠಾನ" ಎಂಬುವ ಶೂನ್ಯವನು ನೀನು

ಗುರುಗಳ ಗೃಹದಲ್ಲಿ ಸರಿಯಾಗಿ ಅರ್ಥೈಸು
 
॥ ೩೦ ॥
 
ಶೂನ್ಯವೆಂಬುದು ಒಂದು ಭಿನ್ನಮತ ವಿಷಯ

"ಅಸತ್ " ಆಗಿಹುದು ಅದು ಆಧಾರವಾಗದು

ಅಧಿಷ್ಠಾನವಾಹುದಕೆ ಸತ್ ಆಗಬೇಕು

ಶುಕ್ತ್ಯಾದಿಗಳ ತೆರದಿ ವೈಧರ್ಮ್ಯ ದೃಷ್ಟಾಂತವಿದು
 
॥ ೩೧ ॥
 
ಅತತ್ವಾವೇದಕವು ಪ್ರಮಾಣವೆಂಬುವ ಮಾತು

ಅತ್ಯಂತ ವ್ಯಾಹತವು, ಆಭಾಸ ಉಕ್ತಿ

ವೇದಗಳು ಅತತ್ವಾವೇದಕವೆನ್ನುವ ಮಂದಿ

ವೇದಗಳ ಪ್ರಾಮಾಣ್ಯ ಅಲ್ಲಗಳೆದಂತಾಯ್ತು
 
॥ ೩೨ ॥
 
ಮಾಯಾವಾದಿಗಳೆಲ್ಲ ವೇದ ದೂಷಕರಹುದು

ಅವಾಚ್ಯವಾಗಿಹುದವರ ಆ ಬ್ರಹ್ಮತತ್ವ

ವೇದಾಂಗವೆನಿಸಿರುವ ಉಪನಿಷತ್ತುಗಳನ್ನು

ತತ್ವಾವೇದಕವೆಂದು ಹೇಗೆ ಎಣಿಸುವರು ?
 
॥ ೩೩ ॥
 
ಮೂರು ಲಕ್ಷಣದಿಂದ ವೇದವಾಕ್ಯಗಳೆಲ್ಲ

ಬ್ರಹ್ಮ ಲಕ್ಷಣವನ್ನು ಗುರ್ತಿಸುಪುವು ಎಂದಲ್ಲಿ

ಬ್ರಹ್ಮನಿಗೆ ವಾಚ್ಯತ್ವ ರೂಪವೆಲ್ಲವೂ ಕೂಡಿ

ವಿಶೇಷಣವು ಎಂಬುವ ಅನಿಷ್ಟ ಒದಗುವುದು
 
254 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
29
 
30
 
31
 
32
 
33
 
34
 
॥ ೩೪ ॥