This page has been fully proofread once and needs a second look.

ಗುಣಭೇದ ಸಂಬಂಧ ವಿಶ್ಲೇಪಿಷಿಸಿದರೆ

ಪರಮಾತ್ಮನ ಸ್ಥಿತಿಯು ವ್ಯಕ್ತವಾಗುವುದು
 

ಈಶ್ವರನ ಗುಣಗಳಿಗೆ ಅಭೇದ ಒಪ್ಪುವೆವು

ಭೇದ ವ್ಯವಹಾರಿಕೆ ಅಡ್ಡಿ ನಮಗಿರದು
 
॥ ೨೩ ॥
 
ವೈಶೇಷಿಕಾದಿಗಳು ವೇದಗಳ ವೈರಿಗಳು

ಶೂನ್ಯವೇ ತತ್ವವೆಂದೆನ್ನುವರು ಕೆಲರು

ಮಾಧ್ಯಮಿಕರೆನಿಸಿರುವ ಬೌದ್ಧಿಧೈಕ ದೇಶಗಳು
 

ಎರಡು ಪಂಗಡವಾಗಿ ಒಡೆದಿಹರು ಇಂದು
 
॥ ೨೪ ॥
 
ಮಾಯಾವಾದಿಗಳೆಂಬ ಪ್ರಚ್ಛನ್ನ ಶೂನ್ಯರು

ಕರೆದಿಹರು ವೇದಗಳ ಅತತ್ವವೇದಕವೆಂದು

ಶೂನ್ಯವನೆ ಬ್ರಹ್ಮ ವೆಂದವರು ಕರೆಯುವರು

ತಮ್ಮನ್ನು ವೇದಾಂತಿಗಳು ಎಂದು ಎನ್ನುವರು
 
॥ ೨೫ ॥
 
ವಿಯದಾದಿ ಜಗದೆಲ್ಲ ಅಪರ ತತ್ವಗಳೆಲ್ಲ

ಪರತತ್ವ ಬ್ರಹ್ಮನಲಿ ತೋರಿಹುದು ಎನ್ನುವರು

ಶೂನ್ಯಕ್ಕೂ ಮಿಗಿಲಾದ ವೈಶಿಷ್ಟ್ಯ ಅವಗಿಲ್ಲ

ಬ್ರಹ್ಮ, ಶೂನ್ಯದ ನಡುವೆ ಭೇದವೇ ಇಲ್ಲ
 
॥ ೨೬ ॥
 
ತಮ್ಮ ಸಿದ್ಧಾಂತಗಳ ಮನ್ನಿಸದ ಮಂದಿಗಳ

ತರ್ಕವಿಲ್ಲದ ನ್ಯಾಯದಾಭಾಸಗಳನೆಲ್ಲ

ಸೂಕ್ತ ತರ್ಕದ ಸಹಿತ ಶಾಸ್ತ್ರಸಮ್ಮತವಾಗಿ

ಖಂಡಿಸುತ ನಡೆದರು ಆನಂದ ತೀರ್ಥರು
 
॥ ೨೭ ॥
 
ಜಗಕೆ ಕಾರಣವಲ್ಲ ವಿಮತವಾಗಿಹ ಶೂನ್ಯ

ಕಾರಣವು ಸತ್ ಎಂಬುದಾಗಿರಲೇಬೇಕು

ಕುಂಭಕಾರನ ತೆರದಿ ವ್ಯತಿರೇಕ ಅನುಮಾನ

ಇದರಿಂದ ಆ ಶೂನ್ಯ ಹುಸಿಯಾಗಬೇಕು
 
ಹದಿನೈದನೆಯ ಸರ್ಗ / 253
 
23
 
24
 
25
 
26
 
27
 
28
 
॥ ೨೮ ॥