This page has been fully proofread once and needs a second look.

ಈ ಜಗದ ಸೃಷ್ಟಿಗೆ ಚೇತನವು ಅಂಗ
 

ಆ ಚೇತನವು ಅಂಗಿ ಎಂದು ಸಾರುವ ಮತವು
 

ಈಶ್ವರನ ಸ್ವಾತಂತ್ರ್ಯ
ತರ್ಕಗಳಿಗಾ ತರ್ಕ ಗ್ರಾಹ್ಯವಾಗುವುದಿಲ್ಲ
 
ಮನ್ನಿಸದೆ ಹೋದಲ್ಲಿ
 

 

ತರ್ಕಗಳಿಗಾ ತರ್ಕ ಗ್ರಾಹ್ಯವಾಗುವುದಿಲ್ಲ ॥ ೧೧ ॥
 
ಸಕಲವೂ ಸರ್ವಜ್ಞ ಪರಮಾತ್ಮ ನಿರ್ಮಿತ

ಆತ್ಮನ ಪರಿಯಲ್ಲಿ ವಿಶ್ವವೂ ಅನಿತ್ಯ

ಅದರಿಂದ ಇವೆರಡು ಈಶ್ವರನ ಸೃಷ್ಟಿ

ಇಂತಹ ಮುಕ್ತಿಯಲಿ ಈಶ್ವರನು ಮಾನ್ಯ
 
॥ ೧೨ ॥
 
ಸಕಲ ಅನುಮಾನಕೂ ವೇದಗಳ ಬೆಂಬಲ

ಶೃತಿಮಾನ್ಯ ವಲ್ಲದ ಅನುಮಾನವೆಲ್ಲ

ಪತಿಯಿಂದ ವರ್ಜಿತ ಕಾಮಿನಿಯ ತೆರದಲ್ಲಿ

ಪ್ರತಿವಾದಿಗಳ ಇಚ್ಛೆ ಅನುಸರಿಸುವವು
 
॥ ೧೩ ॥
 
ಈ ವಿಶ್ವವೆಲ್ಲಕೂ ಬ್ರಹ್ಮನೇ ಚೇತನನು

ಅದರಿಂದ ಪರಿಣಾಮ ಕಾರಣವು ಅವನ
ಲ್ಲ
ಪರಿಣಾಮ ಕಾರಣವು ಚೇತನವು ಅಲ್ಲ

ಹಾಲಿನ ದೃಷ್ಟಾಂತ ಇಲ್ಲಿ ದಿಟವಹುದು
 
॥ ೧೪ ॥
 
ಪಶುಪತಿಯು ಎಂದೆಂದೂ ವಿಶ್ವಕಾರಣನಲ್ಲಿ

ಚೈತ್ರದಂತಿವನಲ್ಲಿ ದೋಷಗಳು ಇಹವು

ಗಣಪತಿ ಸೂರ್ಯರೂ ವಿಶ್ವಕಾರಣರಲ್ಲ

ಎಂಬುದಿದು ಕೈಮುತ್ಯ ಸಿದ್ಧವಾಗಿಹುದು
 
॥ ೧೫ ॥
 
ಸುಖಾದಿ ಗುಣಗಳನು ಈಶ್ವರನು ಹೊಂದಿಲ್ಲ

ದುಃಖಾದಿ ಗುಣಗಳನೂ ಆತ ಹೊಂದಿಲ್ಲ

ಸುಖಾದಿಗಳನಾವ ಹೊಂದಿರುವುದಿಲ್ಲವೋ
 

ಸಾಂಸಾರಿಕನ ತೆರದಿ ಅವ ದು:ಖವನೂ ಹೊಂದನು
 
ಹದಿನೈದನೆಯ ಸರ್ಗ / 251
 
11
 
12
 
13
 
14
 
15
 
16
 
॥ ೧೬ ॥