This page has been fully proofread once and needs a second look.

ಬ್ರಹ್ಮ ಸೂತ್ರಗಳೆಂಬ ರಥ ಸಮೂಹಗಳಿಂದ

ನಾಲ್ಕು ವೇದಗಳೆಂಬ ಗಜ ನಿವಹದಿಂದ

ಚತುರೋಕ್ತಿಯೆಂಬುವ ಕಾಲಾಳು ಪಡೆಯಿಂದ

ಸ್ಮೃತಿಯೆಂಬ ಅಶ್ವಗಳ ಬಲದಿಂದ ಕೂಡಿತ್ತು
 
॥ ೫ ॥
 
ವೃದ್ಧಿ ಹಾಸಗಳಿಂದ, ಶ್ರೀ ಹರಿಗೆ ಪ್ರಿಯವಾದ

ಮೇಘಗರ್ಜನೆಯಂಥ ಸುಸ್ವರದಿ ಕೂಡಿರುವ

ವಿವರದಲಿ ಅರ್ಥಗಳ ನೀಡುವ ಪ್ರವಚನವು

ಸಾಗರದಿ ಜನಿಸಿದ ಲಕುಮಿಯಂತಿತ್ತು
 
॥ ೬ ॥
 
ಪದ್ಮೇಶ ಪದ ಪದ್ಮದಾಶ್ರಿತ್ಯೆ ಭಾರತಿ

ಕಮಲ ಸಂಭವನಾದ ನಾಲ್ಮೊಗದ ಬ್ರಹ್ಮ

ಈಶ್ವರನ ಶಿರದಲ್ಲಿ ಲಾಲಿತಳು ಗಂಗೆ

ಇವರ ಸಂಗಮವಾಯ್ತು ಮಧ್ಪ್ರವಚನದಲ್ಲಿ
 
॥ ೭ ॥
 
ಶ್ರೀ
ಮದಾಚಾರ್ಯರ ಉಪದೇಶ ಸಾರ
 

 
"ನಾರಾಯಣನು ಅನಂತ ಗುಣನಾಗಿಹನು
 

ಬ್ರಹ್ಮನಾಯಕನಿವನು; ವೇದ ಪ್ರತಿಪಾದ್ಯನು

ವಿಶ್ವಕರ್ತನು ಇವನು: ವಿಶ್ವಜ್ಞನವನು"

ಶೃತಿಯುಕ್ತಿಯಿಂದಿಂತು ಅವರು ಮಂಡಿಸಿದರು
 
॥ ೮ ॥
 
"ಪ್ರಧಾನವಪರಾಧೀನವಾಗಿಹುದು ಹಾಲಿನಂತೆ
 
"
ಎಂಬೊಂದು ದೃಷ್ಟಾಂತ ನೀಡಿದರೆ ನಾವು

ಸಾಧ್ಯ ವೈಕಲ್ಯದ ದೋಷ ಉಂಟಾಗುವುದು

ಇಂತೆಂದು ನಿರೀಶ್ವರವಾದ ಖಂಡಿಸಿದರು
 
॥ ೯ ॥
 
ಸೃಷ್ಟಿಯ ಕ್ರಿಯೆಯೀಗ ವಿವಾದ ವಿಷಯ

ಸೃಷ್ಟಿಯು ಚೇತನನ ಇಚ್ಛೆಯಂತಿಹುದು

ವಸ್ತ್ರವನು ನೇಕಾರ ಸೃಷ್ಟಿಸುವ ತೆರದಲ್ಲಿ

ಪರಮಾತ್ಮ ಸೃಷ್ಟಿಸಿಹ ಜೀವ ಜಡ ಜಗವನ್ನು
 
5
 
7
 
8
 
10
 
॥ ೧೦ ॥