This page has been fully proofread once and needs a second look.

ಶ್ರೀ ಗುರುಭೋಭ್ಯೋ ನಮಃ

ಹದಿನೈದನೆಯ ಸರ್ಗ
 

 
ಅಮರಾಲಯದಲ್ಲಿ ಅಪೂರ್ವ ಭಾಷೋಷ್ಯೋಪನ್ಯಾಸ
 

 
ಆ ಬಳಿಕ ಮತ್ತೊಮ್ಮೆ ಆನಂದ ತೀರ್ಥರು

ಹಳ್ಳಿಯಲಿ ಹಳ್ಳಿಗರು ಎಲ್ಲರೂ ಸೇರುವ

ಅಮರಾಲಯ ಎಂಬ ಸ್ಥಳದಲ್ಲಿ ಕುಳಿತು

ಅದ್ಭುತದ ಭಾಷ್ಯವನ್ನು ಪ್ರವಚನವ ಮಾಡಿದರು
 
॥ ೧ ॥
 
ತ್ರಿವಿಕ್ರಮ ಪಂಡಿತರಿಂದ ಉಪನ್ಯಾಸ ಶ್ರವಣ

 
ಅನ್ಯ ಸಿದ್ದಾಂಧಾಂತದ ರಥವೊಂದನೇರುತ್ತ

ತೀಕ್ಷ್ಯುಕ್ತಿಗಳೆಂಬ ಆಯುಧವ ಹೊಂದಿದ್ದ

ಪಂಡಿತೋತ್ತಮರಾದ ಶ್ರೀ ತ್ರಿವಿಕ್ರಮರನ್ನು

ಪ್ರತಿವೀರನೆಂಬಂತೆ ಮಧ್ವಮುನಿ ಕಂಡರು
 
॥ ೨ ॥
 
ಶ್ರೀಮದಾಚಾರ್ಯರ ಉಪನ್ಯಾಸ ವೈಭವ

 
ಹರಿಯೇ ಸರ್ವೋತ್ತಮ ಎಂದೆನುತ ಸಾಧಿಸುವ

ಮಧ್ವರ ಪ್ರವಚನವು ಆಗ್ರಹವ ಹೊಂದಿದ್ದು

ಸ್ವಾಮಿಯ ವಿಜಯದಲಿ ಶಿಬಿರದಿಂ ಹೊರಡುವ

ಸೈನಿಕರ ತೆರದಲ್ಲಿ ಹೊರಸೂಸುತಿತ್ತು
 
॥ ೩ ॥
 
ಅತಿ ಮಂದವಿರದ ಗತಿ, ವೇಗವೂ ಅಲ್ಲದುದು

ಶಬ್ದಾರ್ಥ ಸ್ಟಾಖಾಲಿತ್ಯ ಹೊಂದದಿಹುದು ಅದು

ಸ್ವರವರ್ಣ ರೂಪಗಳ ಅವಯವವ ಹೊಂದಿರದೆ

ಪ್ರವಚನವು ಸಂಕೀರ್ಣ ಜಲಧಾರೆಯಂತಿತ್ತು
 
1
 
2
 
3
 
॥ ೩ ॥