This page has been fully proofread once and needs a second look.

ಇನವಿರಹ ಸಹಿಸದಿಹ ಚಕ್ರವಾಕವು, ಪದ್ಮ

ಚಂದ್ರ ಕಿರಣವ ಕಂಡು ಆನಂದಗೊಂಡವು

ಸೂರ್ಯಕಿರಣಗಳಿಂದ ಪರಿತಪ್ತವಾಗಿದ್ದ

ಆ ಜೊನ್ನವಕ್ಕಿಗಳು, ಕುಮುದ ಕುಸುಮಗಳೆಲ್ಲ

ಬೆಳದಿಂಗಳನು ಕಂಡು ಸಂತುಷ್ಟಗೊಂಡವು

ದೈವ ಸೃಜಿಸುವುದಿಲ್ಲ ಎಲ್ಲದಕ್ಕೂ ಹೃದ್ಯವನು
 
॥ ೫೨ ॥
 
ಹರಿಯ ಸ್ವರೂಪವನು ಎಂತು ಬಣ್ಣಿಪಬಹುದು ?

ಇಂದ್ರನೀಲದ ಮಣಿಯ ನೀಲಕಾಂತಿಯ ಸೊಬಗು!

ನವಕುಂದ ಪುಷ್ಪಗಳ ಸೊಬಗಿನ ದ್ವಿಜ ಪಂಕ್ತಿ!

ಶ್ರೀ ಹರಿಗೆ ಪ್ರಿಯವಾದ ವೃಕ್ಷಗಳ ವನರಾಣಿ !

ಪಾರಿಜಾತದ ಪರಿಯ ವೃಕ್ಷಗಳ ಕಾಂತಿಯಲಿ

ಎಲ್ಲೆಡೆಯೂ ಪರಿಮಳವ ಸೂಸುವ ವನಮಾಲೆ !
 
॥ ೫೩ ॥
 
ಮಂದಗಾಮಿನಿಯರು, ಲಜ್ಜೆಯನು ತೊರೆದವರೂ
 

ಕಿರುನಗೆಯ ಸೂಸುವ ಗೋಪ ಬಾಲೆಯರಿಗೆ
 

ಸಂತಸವ ನೀಡುವ ಕೃಷ್ಣನ ರೂಪ !

ಪರಿತಾಪ ಹೀನವದು, ಉಜ್ವಲವು, ವ್ಯಾಪಕವು

ಅತ್ಯಂತ ನವಿರಾದ ವಸ್ತ್ರವನು ತೊಟ್ಟಿಹುದು

ಅತ್ಯಂತ ಉತ್ತಮವು, ಅತ್ಯಂತ ಉತ್ಕೃಷ್ಟ !
 
॥ ೫೪ ॥
 
ಆನಂದ ಜ್ಞಾನಾದಿ ಗುಣಪೂರ್ಣನಾದ

ಶ್ರೀ ಕೃಷ್ಣನೆಂಬುವ ಅತಿ ಶ್ರೇಷ್ಠ ವಸ್ತುವನು

ಆ ಮಧ್ವಮುನಿಗಳು ಪ್ರಕಟಗೊಳಿಸಿದರು

ಶಬ್ದವೆಂಬುವ ಗುಣವ ಹೊಂದಿದಾಕಾಶವನು
 

ತನ್ನ
ಕಿರಣಗಳಿಂದ ಕತ್ತಲೆಯ ಭೇದಿಸುವ

ಚಂದ್ರ, ಮಧ್ವರ ಭೇದ ಇಂತು ಕಾಣಲಿಬಹುದು
 
52
 
53
 
54
 
55
 

 
 
ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ

ಶ್ರೀಮನ್ನಾರಾಯಣ ಪಂಡಿತಚಾರ್ಯ ವಿರಚಿತ
ಶ್ರೀ ಸುಮಧ್ವ ವಿಜಯ ಮಹಾಕಾವ್ಯದ
ಆನಂದಾಂಕಿತ ಹದಿನಾಲ್ಕನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ.
 
246 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ