This page has not been fully proofread.

ಗಂಧಮಾದನ ಗಿರಿಯು ಮೂಲಿಕೆಗಳಾಗರವು
ಅರ್ಧಶತ ಸಾವಿರ ಯೋಜನದ ದೂರದಿಂ
ಎತ್ತಿತಂದನು ಹನುಮ ಸಂಜೀವ ಗಿರಿಯನ್ನು
ಶ್ರೀರಾಮ ಚಂದ್ರನ ಪೂಜೆಗೋಸುಗ ಆತ
ತನ್ನೆರಡು ಕೈಯಲ್ಲಿ ಹೂವನ್ನು ತರುವ
ಅದಕ್ಕಿಂತ ಸುಲಭ ಗಿರಿಯನ್ನು ಹೊರುವುದು
 
ಲಂಕೆಯಾ ಕಾಳಗದ ಶ್ರೀರಾಮ ದೇವರು
ಸಂಹರಿಸಿ ರಾವಣ ಕುಂಭಕರ್ಣಾದಿಗಳ
ಬೆಂಕಿಯಲ್ಲಿ ಸ್ಪುಟಗೊಂಡ ಕನಕಹಾರದ ತೆರದಿ
ಪರಿಶುದ್ಧ ಮಾತೆ ಸೀತೆಯಾ ಜೊತೆಗೆ
ಮರಳಿದರು ಮತ್ತೆ ಅಯೋಧ್ಯೆಯೆಡೆಗೆ
 
ಹಿಂಬಾಲಿಸಿದನವರ ಹನುಮಂತ ದೇವ
 
ಶ್ರೀರಾಮದೇವರದು ನಸುನಗೆಯ ಮೊಗವಹುದು
ನೀಳ ತೋಳುಗಳೆರಡೂ ದಷ್ಟಪುಷ್ಪ
ಕಮಲದಂತಿಹವವರ ಎರಡು ಕಣ್ಣುಗಳು
ನಡಿಗೆಯ ಗಾಂಭೀರ ಗಜರಾಜನಂತಿಹುದು
ಜಗಕೆ ಮಂಗಳವೀವ ಈ ದಿವ್ಯ ಕಾಯವನು
ಎವೆಯಿಕ್ಕದೇ ನೋಡಿ ಸೇವಿಸಿದ ಹನುಮ !
 
ರಾಜ್ಯಾಭಿಷೇಕವು ಶ್ರೀರಾಮಗಾಯ್ತು
ಮನಸೆಳೆವ ರತ್ನದ ಹಾರವೊಂದನು ತೆಗೆದು
ವೈದೇಹಿಗಿತ್ತರು ಶ್ರೀರಾಮದೇವರು
"ನಮ್ಮ ಮನ ಗೆದ್ದವಗೆ ನೀಡು ಇದನು"
ಎಂದು ಬೆಸಗೈದರು ಶ್ರೀರಾಮದೇವರು
ಒಡನೆ ಇತಳು ಸೀತೆ ಹನುಮಗದನು
 
8/ ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
19
 
20
 
21
 
22