This page has been fully proofread once and needs a second look.

ಅವನಿ, ವನ, ಪವನಾಗ್ನಿ, ಆಕಾಶ, ನಾನೆಂಬ

ಆರು ಹಿರಿ ತತ್ವಗಳ, ಸತ್ವ, ರಜ, ತಮಸೆಂಬ

ಮೂರು ಗುಣ ಸಹಿತದ ಅವ್ಯಾಕೃತಂಬರದಿ

ವ್ಯಾಪ್ತನಾಗಿಹನವನು, ಭೇದವರ್ಜಿತನವನು

ಅಸುರ, ಸುರ, ನರರಿಂದ ಅತ್ಯಂತ ಭಿನ್ನನು

ಇಂತಹ ಶ್ರೀ ಹರಿಯ ಚಿಂತಿಸಿದರವರು
 
ಕೃ
॥ ೪೮ ॥
 
ಸ್ಮೃ
ತ್ಯಾದಿ ಶಾಸ್ತ್ರದಲ್ಲಿ ವಿಧಿಸಿರುವ ಕ್ರಮದಂತೆ

ಧರ್ಮ ಕುಶಲಿಗಳಾದ ಆ ಅವನಿದೇವರು

ಸೂರ್ಯ ಕಿರಣವು ಕಂಡ ಕ್ಷಣದಿಂದ ಮೊದಲಿಟ್ಟು

ಸೂರ್ಯನಲಿ ಶ್ರೀ ಹರಿಯ ಕಂಡು ಧ್ಯಾನವ ಮಾಡಿ
 

ತಾರೆಗಳು ಗೋಚರಿಪ ಸಮಯದ ವರೆಗೂ
 

ನಿತ್ಯ ಕೃತ್ಯವ ಮಾಡಿ ಧನ್ಯತೆಯ ಪಡೆದರು
 
॥ ೪೯ ॥
 
ದೇವೇಂದ್ರ ರುದ್ರರನು ಆದ್ಯಂತದಲ್ಲಿ

ಹೊಂದಿರುವ ಹದಿನಾರು ದೇವತೆಗಳನ್ನು

ಚೆನ್ನಾಗಿ ಅರಿತಿರುವ ಭೂಸುರರು ಅಂದು

ಹವಿಸನ್ನು ಅಗ್ನಿಯಲಿ ಭಕ್ತಿಯಿಂದರ್ಪಿಸುತ

ಉಚಿತ ರೂಪದ ಅಗ್ನಿಹೋತ್ರವನ್ನು ಮಾಡಿದರು

ಗಾಯತ್ರೀಲೋಕವು ಇದರಿಂದ ಲಭಿಸುವುದು
 
॥ ೫೦ ॥
 
ಈ ಚಂದ್ರ ಪ್ರಾಯಶಃ ಅಕಳಂಕನಾದಲ್ಲಿ

ನಿಜ ಸಹೋದರಿಯಾದ ಲಕುಮಿ ಆನನವೆಂಬ
 

ಪೂರ್ಣೇಂದು ಸಮನಾಗಿ ಬೆಳಗಬಹುದಿತ್ತು

ಇಂತೆಂದು ಖೇಚರೀ ಲಲನೆಯರು ಗಗನದಲ್ಲಿ
ಲಿ
ಚಂದ್ರ ಸೌಂದರ್ಯವನ್ನು ಕಂಡು ಹಿಗ್ಗುತಲಿರಲು

ಚಂದ್ರಮನು ಉದಿಸಿದನು ಅಂಬರದ ತುದಿಯಲ್ಲಿ
 
ಹದಿನಾಲ್ಕನೆಯ ಸರ್ಗ / 245
 
48
 
50
 
51
 
॥ ೫೧ ॥