This page has been fully proofread once and needs a second look.

ಪಠಣ ಮಾಡಿದ ಪಾಠ ಮನನ ಮಾಡುತಲಿದ್ದ

ಮಿತ್ರರನು ಕುರಿತೊಬ್ಬ ಶಿಷ್ಯನಿಂತೆಂದನು:

"ಶ್ರವಣ ಮಾಡಿದ ಗ್ರಂಥ ಅನುವಾದಿಸದಿರಿ ಈಗ

ಮನನ ಕಾರ್ಯವನೂ ನೀವು ಮಾಡದಿರಿ ಈಗ

ಗುರುಗಳ ಪ್ರವಚನವು ಪ್ರಾರಂಭವಾಗಿಹುದು

ಈಗಲೇ ನೀವೆಲ್ಲ ಅಲ್ಲಿ ಬನ್ನಿ "
 
॥ ೪೪ ॥
 
ಪ್ರವಚನದಿ ತೊಡಗಿದ್ದ ಆನಂದ ತೀರ್ಥರು

ಸತ್ಯವತೀ ಸುತರಂತೆ ಕಂಗೊಳಿಸುತ್ತಿದ್ದರು

ಇಂಥ ಸುಜ್ಞಾನಿಗಳ ಕಂಡ ಆ ಜನರೆಲ್ಲ

ಬಿಡುಗಣ್ಣ ಮುಚ್ಚದೇ ಅವರನ್ನೇ ನೋಡುತ್ತ

ಮನದಲ್ಲಿ ಅತ್ಯಧಿಕ ಮುದವನ್ನು ಪಡೆಯುತ್ತ

ಕಾಲಚಕ್ರದ ಉರುಳ ಅರಿಯದವರಾದರು
 
॥ ೪೫ ॥
 
ಜಗಕೆಲ್ಲ ಬೆಳಕನ್ನು ನೀಡುವಾ ಸೂರ್ಯ

ದೆಯಿಸುವಕಾಲದಲಿ, ಆಶ್ರಸ್ತಮಿಪ ಸಮಯದಲಿ

ಅರುಣರಾಗವ ಹೊಂದಿ ಸ್ಟುಫುಟವಾಗಿ ಶೋಭಿಸುವ

ಅಂತೆಯೇ ಮಧ್ವಮುನಿ ವಿಷ್ಣುಪದದಾಶ್ರಿತರು

ಉತ್ಕೃಷ್ಟ ತೇಜದ ಅತಿಶಯದ ಮಹಿಮರಿಗೆ

ಸಂಪದ್ವಿಪತ್ತುಗಳ ವೈಕಲ್ಯ ವಿರದಾಯ್ತು
 
॥ ೪೬ ॥
 
ಪೃಥಿವೀ ಎಂಬುವ ಲಲನೆ ತುಂಬು ವೈಯಾರದಲ್ಲಿ
 
ಲಿ
ಜಲಧಿ ಎಂಬುವ ನೀಲ ವಸನವನು ಧರಿಸಿಹಳು

ಅರ್ಧಕ್ಷಣ ಸಮಯದಲ್ಲಿ ಅರ್ಧ ಮರೆಯಾಗಿದ್ದ
 

ಅರುಣ ತರಣಿಯ ಬಿಂಬ ಅರುಣ ಕಿರಣದ ಕಾಂತಿ
 

ಪದ್ಮರಾಗದ ಮಣಿಯ ಬಣ್ಣಗಳ ಚೆಲ್ಲಿಹ
ವು
ರಮ್ಯ ರಮಣೀಯತೆಯ ಸೊಗವ ನೀಡುವ ಸಗ್ಗ !
 
244 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
44
 
45
 
46
 
47
 
॥ ೪೭ ॥