This page has been fully proofread once and needs a second look.

ಆಗಲೇ ಶಿಷ್ಯರು ಸಿದ್ಧಪಡಿಸಿರಿಸಿದ್ದ

ಸೂಕ್ಷ್ಮ ವಸ್ತ್ರಗಳಿಂದ ಆವರಿಸಿ ಮೆರೆದಿದ್ದ
 

ರಮಣೀಯ ಪೀಠದಲಿ ಆಸೀನರಾಗಿ
 

ಅಲ್ಲಿದ್ದ ಕವಿವರ್ಯ, ಪಂಡಿತ ಪರಾಯಣರ,

ಹಲವುರೀತಿಯ ಹೃದ್ಯ ವಿದ್ಯಾವಿಲಾಸದಲಿ

ಮನವ ಮುದಗೊಳಿಸುತ್ತ ರಂಜಿಸಿದರವರು
 
॥ ೪೦ ॥
 
ಇಂತಿರಲು ಆಚಾರ್ಯ ಭೂಭ್ರೂವಿಲಾಸವ ಕಂಡು

ಮೆಲುನಗೆಯ ಇಂಗಿತವ ಅರಳುಗಂಗಳಲರಿತು
 

ಶಿಷ್ಯನೊಬ್ಬನು ಎದ್ದು ಗುರುಗಳ ಬಳಿ ಬಂದು

ಪಾಣಿ ಪ್ರವಾಲವನು ಅಡ್ಡವಾಗಿರಿಸಿಕೊಂಡು

ಗುರುಗಳ ಕಿವಿಯಲ್ಲಿ ವಿಷಯವೊಂದನು ತಂದು

ಉಸುರಿದನು ಶೀಘ್ರದಲ್ಲಿ ಸಂಕ್ಷೇಪವಾಗಿ
 
॥ ೪೧ ॥
 
ಗುರುಗಳಿಗೆ ನಮಿಸುತ್ತ ಕೃತಕೃತ್ಯರಾಗುತ್ತ

ಜನನಿವಹ ಅವರ ಬಳಿ ಅತ್ಯಧಿಕವಾಯ್ತು

ಈ ಜನರ ನಿವಹವನು ದಾಟುವುದಕ್ಕೆತ್ನಿಸುತ
 

ಗುರುಗಳ ಬಳಿ ಸಾರಿ ನಮಿಸುವ ಬಯಕೆಯಲಿ
 

ನಾನು ತಾನೆಂದೆನುತ ಮುನ್ನುಗ್ಗಿ ಬಂದು

ಆ ಗೃಹಸ್ಥರು ಗುರುವ ಚರಣಗಳಿಗೆರಗಿದರು
 
॥ ೪೨ ॥
 
ಮಧ್ವ ಮುನಿಗಳ ಮಹಿಮೆ ಕೇಳಿದಾ ಬಹು ಮಂದಿ
 

ದೂರದೂರುಗಳಿಂದ ಬಂದು ಸೇರಿದರು

ಗುರುಗಳ ಮಹಿಮೆಗಳು ನೂರು ಮಡಿ ಅಧಿಕ

ಎಂತೆಂದು ವಾಸ್ತವದಿ ಅರಿತ ಆ ಜನರೆಲ್ಲ

ಮೂಕವಿಸ್ಮಿತರಾಗಿ ಗುರುಗಳಿಗೆ ನಮಿಸಿದರು

ಕುಳ್ಳಿರೆನ್ನುತ ಅವರ ಗುರುಗಳಾದರಿಸಿದರು
 
40
 
41
 
42
 
43
 
॥ ೪೩ ॥