This page has been fully proofread once and needs a second look.

ಪೂಜೆಯ ಸಮಯದಲ್ಲಿ ಶ್ರೀಮದಾಚಾರ್ಯರು

ಹದಿನಾರು ಉಪಚಾರ, ಅರ್ಥ್ಘ್ಯ ಪಾದ್ಯಾದಿಗಳನ್ನು

ಶಾರ್ಙ್ಞಪಾಣಿಗೆ ಸಲಿಸಿ ಆತನನು ಮೆಚ್ಚಿಸುತ

ದ್ವಾತ್ರಿಂಶದಪರಾಧ ದೋಷಗಳ ವರ್ಜಿಸುತ

ಪರಮಭಕ್ತಿಯಲವರು ಶ್ರೀಹರಿಯ ನರ್ಚಿಸುತ
 

ಲ್ಲಿಸಿದರು ಆರು ಬಗೆ ಅನೂಪಚಾರಗಳ
 
॥ ೩೬ ॥
 
ದೇಹವೆಂಬುವ ತಮ್ಮ ದಿವ್ಯ ಮಂದಿರದಲ್ಲಿ

ಶ್ರದ್ಧೆಯೆಂಬುವ ದಿವ್ಯ ತೀರ್ಥವನ್ನು ಹರಿಸಿ

ಚಿತ್ತವೆಂಬುವ ದಿವ್ಯ ಜಲದಿಂದ ಅಭಿಷಿಕ್ತ

ಪದ್ಮರಾಗದ ಮಣಿಯ ಕಾಂತಿಯಲ್ಲಿ ಕೂಡಿರುವ

ಹೃತ್ಸರೋಜದಲಿ ಆಸೀನನಾಗಿರುವ

ಶ್ರೀ ಹರಿಯ ಪೂಜಿಪರು ಭಾವಾಷ್ಟಪುಷ್ಪದಲ್ಲಿ
 
ಲಿ ॥ ೩೭ ॥
 
ಇಂತು ಆ ಶ್ರೀ ಹರಿಯ ಭಕ್ತಿಯಲ್ಲಿ ಪೂಜಿಸಿ

ಭುಜಯುಗ್ಗಳಿಗೆಲ್ಲ ಸಾಂದ್ರ ಚಂದನ ಹಚ್ಚಿ
 

ಪರಿಮಳವ ಸೂಸುವ ಕಿರುನಗೆಯ ಮೊಗದಿಂದ
 

ಸ್ನಿಗ್ಧ ಕೌಶೇಯದ ವಸ್ತ್ರದಲ್ಲಿ ಶೋಭಿಸುತ

ಮನುಜ, ಸುರ, ಮುನಿಗಳ ಕಂಗರೌಳೌತಣವಾಗಿ

ಅತಿಶಯದಿ ಮೆರೆದರು ಆನಂದ ತೀರ್ಥರು
 
॥ ೩೮ ॥
 
ವೇದವಾದಿಗಳಲ್ಲಿ ಕೋವಿದರು ಮಧ್ವರು

ಶ್ರೀ ಹರಿಗೆ ಪೊಡಮಡುವ ಪರಮ ಭಕ್ತರು ಅವರು

"ಲೋಕನಿಯಮಕ್ಕೆಲ್ಲ ಆದೇಶ ನೀಡುವವ
 

ಶ್ರೀ ಹರಿಯು ಕರುಣಿಸಲಿ ಎಮಗೆ ಮಂಗಳವ
"
ಎನ್ನುತಲಿ ಆ ಗುರುವು ಅಪ್ರಯಾಸದಿ ದೊರೆತ

ಪರಮಾನ್ನ ನೈವೇದ್ಯ ಭಕ್ತಿಯಲ್ಲಿ ಭುಜಿಸಿದರು
 
11
 
242 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
36
 
37
 
38
 
39
 
॥ ೩೯ ॥