This page has not been fully proofread.

ಪೂಜೆಯ ಸಮಯದಲ್ಲಿ ಶ್ರೀಮದಾಚಾರ್ಯರು
ಹದಿನಾರು ಉಪಚಾರ, ಅರ್ಥ್ಯ ಪಾದ್ಯಾದಿಗಳನ್ನು
ಶಾರ್ಜಪಾಣಿಗೆ ಸಲಿಸಿ ಆತನನು ಮೆಚ್ಚಿಸುತ
ದ್ವಾತ್ರಿಂಶದಪರಾಧ ದೋಷಗಳ ವರ್ಜಿಸುತ
ಪರಮಭಕ್ತಿಯಲವರು ಶ್ರೀಹರಿಯ ನರ್ಚಿಸುತ
 
ಸಲ್ಲಿಸಿದರು ಆರು ಬಗೆ ಅನೂಪಚಾರಗಳ
 
ದೇಹವೆಂಬುವ ತಮ್ಮ ದಿವ್ಯ ಮಂದಿರದಲ್ಲಿ
ಶ್ರದ್ಧೆಯೆಂಬುವ ದಿವ್ಯ ತೀರ್ಥವನ್ನು ಹರಿಸಿ
ಚಿತ್ತವೆಂಬುವ ದಿವ್ಯ ಜಲದಿಂದ ಅಭಿಷಿಕ್ತ
ಪದ್ಮರಾಗದ ಮಣಿಯ ಕಾಂತಿಯಲ್ಲಿ ಕೂಡಿರುವ
ಹೃತ್ಸರೋಜದಲಿ ಆಸೀನನಾಗಿರುವ
ಶ್ರೀ ಹರಿಯ ಪೂಜಿಪರು ಭಾವಾಷ್ಟಪುಷ್ಪದಲ್ಲಿ
 
ಇಂತು ಆ ಶ್ರೀ ಹರಿಯ ಭಕ್ತಿಯಲ್ಲಿ ಪೂಜಿಸಿ
ಭುಜಯುಗ್ಧಗಳಿಗೆಲ್ಲ ಸಾಂದ್ರ ಚಂದನ ಹಚ್ಚಿ
 
ಪರಿಮಳವ ಸೂಸುವ ಕಿರುನಗೆಯ ಮೊಗದಿಂದ
 
ಸ್ನಿಗ್ಧ ಕೌಶಯದ ವಸ್ತ್ರದಲ್ಲಿ ಶೋಭಿಸುತ
ಮನುಜ, ಸುರ, ಮುನಿಗಳ ಕಂಗರೌತಣವಾಗಿ
ಅತಿಶಯದಿ ಮೆರೆದರು ಆನಂದ ತೀರ್ಥರು
 
ವೇದವಾದಿಗಳಲ್ಲಿ ಕೋವಿದರು ಮಧ್ವರು
ಶ್ರೀ ಹರಿಗೆ ಪೊಡಮಡುವ ಪರಮ ಭಕ್ತರು ಅವರು
"ಲೋಕನಿಯಮಕ್ಕೆಲ್ಲ ಆದೇಶ ನೀಡುವವ
 
ಶ್ರೀ ಹರಿಯು ಕರುಣಿಸಲಿ ಎಮಗೆ ಮಂಗಳವ
ಎನ್ನುತಲಿ ಆ ಗುರುವು ಅಪ್ರಯಾಸದಿ ದೊರೆತ
ಪರಮಾನ್ನ ನೈವೇದ್ಯ ಭಕ್ತಿಯಲ್ಲಿ ಭುಜಿಸಿದರು
 
11
 
242 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
36
 
37
 
38
 
39