This page has been fully proofread once and needs a second look.

ಈ ಪತ್ರಗಳ ಅಕ್ಷರವು ನೋಡಲಿಕೆ ಸುಂದರ

ಅತಿ ವಿರಲವಲ್ಲದ, ನೇರ, ಸಮ, ಪಂಕ್ತಿಗಳು

ಲಿಪಿಗಳೆಲ್ಲವೂ ಕೂಡ ಅಶ್ವ, ಗಜದಾಕಾರ !

ಪತ್ರಗಳ ನಾಲ್ಕೆಡೆಯು ಲಿಪಿಯಿಂದ ವರ್ಜಿತ!

ಕುಶಲ ಲಿಪಿ ಕಾರರು ಬರೆದಿರುವ ಪತ್ರದ

ಅಕ್ಷರವು ಶೋಭಿಸುತ ಮನವ ತಣಿಸುತ್ತಿತ್ತು
 
॥ ೨೦ ॥
 
ಅಭ್ಯಾಸ, ಚಾತುರ್ಯ, ಬಲವುಳ್ಳ ಶಿಷ್ಯರು

ವಾಚಿಸಲು ಯೋಗ್ಯವಹ ಗ್ರಂಥಗಳ ಆದಿಯನು

ತಕ್ಷಣವೇ ನೋಡಿದರು ಅಭಿರುಚಿಯ ಬಲದಿಂದ

ಮತ್ತೆ ಕೆಲವರು ಅದನು ತಡವಾಗಿ ಓದಿದರು

ಆದರೂ ಅವರೆಲ್ಲ ಸಾಮ್ಯವನು ಹೊಂದಿದರು

ಹರಿ, ಗುರುವ ನಮನ, ಸಿದ್ಧಿ ಸಾಧನೆಯಿಂದ
 
॥ ೨೧ ॥
 
ನಮಿಸಿ ಆ ಶೋಶ್ರೋತೃಗಳು ಮೌನದಲ್ಲಿ ಕುಳಿತಿರಲು

ರವಿಗಿಂತ ಮಿಗಿಲಾದ ರವಿವಂದ್ಯ ಚರಣರು

ಸಂಜೆಯ ಮುಗಿಲಿನ ಕೆಂಪುಬಣ್ಣದ ತೆರೆಯ

ಮೆಲಮೆಲನೆ ಸರಿಸುತ್ತ ಆನಂದ ತೀರ್ಥರು

ಸುಜನ ಸಭೆಯೆಂಬುವ ಆ ಗಗನದಲ್ಲಿ

ಶೋಭಿಸುತ ಕುಳಿತರು ಭವ್ಯತೆಯ ಬೆಡಗಿನಲಿ
 
॥ ೨೨ ॥
 
ಮೂರು ಭುವನಗಳಲ್ಲಿ ಶ್ರೇಷ್ಠವೆಂದೆನಿಸಿರುವ

ಮೂರು ತೇಜಗಳಿಂದ ಪ್ರಕಟ ಗೊಳ್ಳುತಲಿರುವ

ಮೂರು ವೇದಗಳನ್ನು ವಿವರದಲಿ ವರ್ಣಿಸುವ

ಮೂರು ವ್ಯಾಹೃತಿಗಳ ಸಾರವಾಗಿರುವ

ಮೂರು ವರ್ಣಗಳನ್ನು ಒಂದಾಗಿ ಕೂಡಿಸುತ

ಮಧ್ವಮುನಿ ಪ್ರಣವವನು ಉಚ್ಚರಿಸಿದರಲ್ಲಿ
 
238 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
20
 
21
 
22
 
23
 
॥ ೨೩ ॥