This page has been fully proofread once and needs a second look.

ಹಕ್ಕಿಗಳ ಮಧುರತಮ ದನಿಯ ಇಂಚರದಂ
ತೆ
ನಿಶೆಯಲ್ಲಿ ಹನಿಯುವ ಹಿಮದ ಮಣಿಯಂ
ತೆ
<error>
ವಿಪುಲ ಆನುರಾಗವನು</error><fix>ವಿಪುಲಾನುರಾಗವನು</fix> ತಕ್ಷಣವೇ ಪಡೆದಂತೆ

ತನ್ನ ಆಗಮನದಲಿ ಸಂತುಷ್ಟಿ ಪಡೆದಂಥ

ನಿರ್ಮಲಾಂಬರದಲ್ಲಿ ಸ್ಥಿಮಿತಕಮಲ ವದನಗಳ

ದಿಕ್ಷುಪುರಂಧ್ರಿಗಳನ್ನು ಉದಯರವಿ ಚುಂಬಿಸಿದ
 
॥ ೧೬ ॥
 
ರಭಸದಿಂದಲಿ ಮಾಳ್ದ ನಮನದಿಂದಾಗಿ

ಹುಟ್ಟಿದಾ ಧೂಳಿಗಳ ಶೋಭಾವಿಶೇಷ !
 

ಕಿಟಕಿಯಲಿ ತೂರಿದಾ ಸೂರ್ಯ ಕಿರಣಗಳು
 

ಸಕಲ ದಿಕ್ಕುಗಳಲ್ಲಿ ಸಾರಿತ್ತು ಸಂದೇಶ:

"ಶಾಸ್ತ್ರ ಶ್ರವಣಕೆ ಇದು ಸರಿಯಾದ ಕಾಲ
"
ಮಧ್ವ ಶಿಷ್ಯರಿಗಾಯ್ತು ಮಿತ್ರ ಉಪಕಾರ
 
॥ ೧೭ ॥
 
ವಿಹಿತ ಕರ್ಮವನೆಲ್ಲ ವಿಹಿತದಲಿ ಪೂರೈಸಿ

ಧನ್ಯ ಸನ್ಯಾಸಿಗಳ ವರ್ಗದಿಂದೊಡಗೂಡಿ

ತ್ವರೆಯಿಂದ ಆ ಮಧ್ವ ಶಿಷ್ಯರುಗಳೆಲ್ಲ

ವ್ಯಾಖ್ಯಾನ ಮಂಟಪದಿ ರಾರಾಜಿಸುತ್ತಿದ್ದ

ಮಧ್ವಮುನಿಗಳ ಶ್ರೇಷ್ಠ ಯೋಗಪೀಠದ ಸುತ್ತ

ಕೂಡಿದರು ವ್ಯಾಖ್ಯಾನ ಶ್ರವಣಕಾಗಿ
 
॥ ೧೮ ॥
 
ಮುರವೈರಿಯಾವಾಸ ಸ್ಥಾನ ದಂತಿದ್ದ

ನಿರ್ಮಲ ಬಭುರದಿ ರಾರಾಜಿಸುತ್ತಿದ್ದ

ರಮ್ಯ ಆಚ್ಛಾದನದಿ ಕೂಡಿ ಕಂಗೊಳಿಸಿದ್ದ

ವಿವಿಧ ಕವಲಿಕೆಯಿಂದ ಕೂಡಿ ಮೆರೆದಿದ್ದ

ತಾಲಪತ್ರಗಳ ಆ ಶ್ರೇಷ್ಠತಮ ಸಂಪುಟಗಳು

ಅಂತರಂಗದ ಬುದ್ಧಿ ಪರಮಾತ್ಮ ರೂಪಗಳು !
 
16
 
17
 
18
 
19
 
॥ ೧೯ ॥